ಸೊನಾಲಿ ಪೋಗಟ್ ರೇಪ್ & ಮರ್ಡರ್? ಬಿಜೆಪಿ ನಾಯಕಿಯ ಹೃದಯಾಘಾತ ಕೇಸ್ ಗೆ ಬಿಗ್ ಟ್ವಿಸ್ಟ್!
ಹರ್ಯಾಣ;ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ.

ಆಕೆಯ ಸಹೋದರ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಿದ್ದು, ಆಕೆಯ ಇಬ್ಬರು ಸಹಾಯಕರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.ಫೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಸೊನಾಲಿ ಸಹೋದರ ಸೋನಾಲಿಯ ಪಿಎ ಸುಧೀರ್ ಸಾಂಗ್ವಾನ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.ಅವರು ತಮ್ಮ ದೂರಿನ ಪತ್ರದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪವನ್ನು ಮಾಡಿದ್ದಾರೆ.

ಸಾಂಗ್ವಾನ್ ತನ್ನ ಸ್ನೇಹಿತ ಸುಖ್ವಿಂದರ್ ಜೊತೆಗೆ ಸೋನಾಲಿಯನ್ನು ಆಕ್ಷೇಪಾರ್ಹ ವೀಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ಆಕೆಯ ಹತ್ಯೆಯ ಹಿಂದೆ ಕೆಲವು ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು.
23ರ ಬೆಳಗ್ಗೆ 8 ಗಂಟೆಗೆ ಸುಧೀರ್ ಸಂಗ್ವಾನ್​ನಿಂದ ನನಗೆ ಕರೆ ಬಂತು,ರಾತ್ರಿ 2 ಗಂಟೆಗೆ ನಿಮ್ಮ ಸೋದರಿ ಕುಸಿದು ಬಿದ್ದರು ಎಂದು ಹೇಳಿದರು.ಘಟನೆ ನಡೆದ ಸಮಯದಲ್ಲೇ ನಮಗೆ ಏಕೆ ಕರೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರತಿ ಬಾರಿಯೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿಯೇ ಅಲ್ಲಿ ಏನೋ ತಪ್ಪಾಗಿದೆ ಎಂದು ನಾವು ಭಾವಿಸಿದೆವು.2 ಗಂಟೆಗೆ ಆಕೆ ಕುಸಿದುಬಿದ್ದಿದ್ದಾಳೆ.ಆ ಕ್ಷಣದಲ್ಲಿ ಅವರು ನಮಗೇಕೆ ಕರೆ ಮಾಡಲಿಲ್ಲ?ಅವಳು ಸತ್ತ ನಂತರ ನಮಗೆ ಕರೆ ಮಾಡಿದರು ಎಂದು ವತನ್​ ಧಾಕಾ ಅನುಮಾನ ವ್ಯಕ್ತಪಡಿಸಿದ್ದಾರೆ.ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು