ಸೈನಿಕನ ಮೇಲೆ ಹಲ್ಲೆ ನಡೆಸಿ ಪಿಎಫ್ ಐ ಬರಹ ಆರೋಪ; ವಿಭಿನ್ನ ತಿರುವು ಪಡೆದ ಪ್ರಕರಣ

ಕೊಲ್ಲಂ: ಕೇರಳದ ಕಡಕ್ಕಲ್ ನಲ್ಲಿ ರಜೆ ಮುಗಿಸಿ ಕೆಲಸಕ್ಕೆ ಮರಳುತ್ತಿದ್ದ ಸೈನಿಕನ ಮೇಲೆ ಹಲ್ಲೆ ನಡೆಸಿ ಬೆನ್ನಿನ ಮೇಲೆ ‘ಪಿಎಫ್ ಐ’ ಎಂದು ಬರೆಯಲಾಗಿದೆ ಎಂಬ ಸುದ್ದಿ ಇದೀಗ ವಿಭಿನ್ನ ತಿರುವು ಪಡೆದುಕೊಂಡಿದೆ. ಇದೊಂದು ಯೋಧನೇ ಕಟ್ಟಿರುವ ಕಥೆ ಎಂದು ತನಿಖೆ ವೇಳೆ ಸಾಬೀತಾಗಿದೆ.

ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನದ ಚನಪಾರಾ ಮೂಲದ ಶೈನ್ ಕುಮಾರ್ (35) ಮತ್ತು ಆತನ ಸ್ನೇಹಿತ ಜೋಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ, ಜನರ ಗುಂಪು ದಾರಿಯಲ್ಲಿ ತಡೆದು, ಥಳಿಸಿ, ಅಂಗಿಯನ್ನು ಹರಿದುಹಾಕಿ, ಹಸಿರು ಬಣ್ಣದಲ್ಲಿ ಪಿಎಫ್ಐ ಎಂದು ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಆದರೆ ಇದು ಸೈನಿಕನೇ ಸಿದ್ಧಪಡಿಸಿದ ಕಥೆ ಮತ್ತು ಸ್ನೇಹಿತನೇ ಬೆನ್ನಿನ ಮೇಲೆ ಬರೆದಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.

‘ಪಿಎಫ್ಐ’ ಬರೆಯಲು ಬಳಸಿದ ಬಣ್ಣ ಮತ್ತು ಕುಂಚವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಫೇಮಸ್ ಆಗಬೇಕೆಂಬ ಶೈನ್ ಆಸೆಯೇ ನಕಲಿ ದೂರು ದಾಖಲಿಸಲು ಕಾರಣ ಎಂದು ಅವರ ಸ್ನೇಹಿತ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್