ಮಂಗಳೂರು: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಉಳ್ಳಾಲ ಘಟಕದ ವತಿಯಿಂದ ಡಿ.9(ಇಂದು) ಉಳ್ಳಾಲ ತಾಲೂಕು ಯುವಜನ ಸಮಾವೇಶ ನಡೆಯಲಿದೆ.
ಸಂಜೆ 6:45ಕ್ಕೆ ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ, ಸೋಲಿಡಾರಿಟಿ ಕೇರಳ ಉಪಾಧ್ಯಕ್ಷರಾದ ಶುಹೈಬ್ ಸಿ ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸೋಲಿಡಾರಿಟಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ,
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ತಫ್ಲೀಲ್ ಉಪ್ಪಿನಂಗಡಿ, ಉಳ್ಳಾಲ ತಾಲೂಕು ಅಧ್ಯಕ್ಷ ಡಾ. ಝೈನುದ್ದೀನ್ ಸೇರಿದಂತೆ ಜಿಲ್ಲಾ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಉಳ್ಳಾಲ ತಾಲೂಕು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.