ನವದೆಹಲಿ;2025ರಲ್ಲಿ ಭೂಮಿಗೆ ಸೌರ ಚಂಡಮಾರುತವು ಅಪ್ಪಳಿಸಲಿದ್ದು, ಇದರಿಂದ ಅಂತರ್ಜಾಲ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಕುರಿತು ನಾಸಾ ವಿಜ್ಞಾನಿಗಳು ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಹಿಂದೆ ಸೌರ ಚಂಡಮಾರುತ ಅಪ್ಪಳಿಸಿದ ಪರಿಣಾಮ 1989ರಲ್ಲಿ ಅನೇಕ ಗಂಟೆಗಳು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.
ತೀವ್ರ ಸೌರ ಚಂಡಮಾರುತವು ದೂರ ಸಂಪರ್ಕಕ್ಕೆ ಅಡ್ಡಿಪಡಿಸಬಹುದಾದ ಸಾಗರದೊಳಗಿನ ಸಂವಹನ ಕೇಬಲ್‌ಗಳಂತಹ ದೊಡ್ಡ ಪ್ರಮಾಣದ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಅಂತರ್ಜಾಲ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಒಂದು ದಿನ ಅಮೆರಿಕದಲ್ಲಿ ಅಂತರ್ಜಾಲ ಇಲ್ಲದಿದ್ದರೆ 1,100 ಕೋಟಿ ಡಾಲರ್ ನಷ್ಟವಾಗಲಿದೆ.ಸೌರ ಚಂಡಮಾರುತದಿಂದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ ಎನ್ನಲಾಗಿದೆ.
ಭೂಮಿಯಾಳದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಇದರಿಂದ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು ಸೇರಿದಂತೆ ಹೆಚ್ಚಿನ ಅಂತಸ್ತು ಹೊಂದಿರುವ ದೊಡ್ಡ ಕಟ್ಟಡಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.