ವ್ಯಕ್ತಿಯ ಸಾವಿನ ಬಳಿಕ ಆತನ ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಗಳನ್ನು ಬೇರೆಯವರು ಬಳಕೆಗೆ ಅವಕಾಶ ಇದೆಯಾ? ಈ ರೀತಿ ಇಂದಿನ ಇಂಟರ್ ನೆಟ್ ಯುಗದಲ್ಲಿ ಜನರಿಗೆ ಪ್ರಶ್ನೆ ಮೂಡುವುದು ಸಹಜ. ಹೌದು ಕೆಲವು ಸಾಮಾಜಿಕ ಮಾದ್ಯಮಗಳು ಈ ಬಗ್ಗೆ ಜನರಿಗೆ ಅವಕಾಶವನ್ನು ಕೂಡ ಮಾಡಿಕೊಟ್ಟಿದೆ.
ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ?
ಫೇಸ್‌ಬುಕ್:
ಎಲ್ಲಾ ಸಾಮಾಜಿಕ ಜಾಲತಾಣಕ್ಕೂ ಖಾಸಗಿ ನಿಯಮಗಳಿವೆ. ಫೇಸ್‌ಬುಕ್ ಅಂತೂ ನೀವು ಸತ್ತ ಮೇಲೆ ನಿಮ್ಮ ಖಾತೆಯನ್ನು ಯಾರು ನಿರ್ವಹಿಸಬೇಕೆಂಬುದನ್ನು ಮೊದಲೇ ನಿರ್ಧರಿಸುವುದಕ್ಕೆ ಬಳಕೆದಾರರಿಗೆ ಸೌಲಭ್ಯವನ್ನು ಕೂಡ ಒದಗಿಸಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲವಷ್ಟೆ. ಇದಕ್ಕಾಗಿ ಮೊದಲು ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಸೆಕ್ಯೂರಿಟಿ ಮತ್ತು ಪ್ರೈವಸಿಯಲ್ಲಿ ‘ಲಿಗಸಿ ಕಾಂಟ್ಯಾಕ್ಟ್’ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಸಾಮಾಜಿಕ ಜಾಲತಾಣದಲ್ಲಿರುವಂತಹ ವ್ಯಕ್ತಿಯನ್ನು ನೀವು ಆಯ್ಕೆ ಮಾಡಿ ಸೆಲೆಕ್ಟ್ ಮಾಡಿದರೆ, ನೀವು ಸತ್ತ ನಂತರ ಆ ವ್ಯಕ್ತಿ ನಿಮ್ಮ ಖಾತೆಯನ್ನು ನಿಭಾಯಿಸುವಂತಹವರಾಗಿತ್ತಾರೆ.
ಇನ್ಸ್ಟಾಗ್ರಾಮ್:
ಇನ್ ಸ್ಟಾಗ್ರಾಮ್ ಖಾತೆಯನ್ನು ಸಾವಿನ ಬಳಿಕ ಇತರರಿಗೆ ಬಳಕೆಗೆ ಅಥವಾ ಅಳಿಸಲು ಆಯ್ಕೆಯನ್ನು ಹೊಂದಿದೆ. ಆದರೆ ಖಾತೆಯನ್ನು ಬಳಸಲು, ಜನರು ಮರಣದ ಪುರಾವೆಯೊಂದಿಗೆ ಇನ್ಸ್ಟಾಗ್ರಾಮ್ ಅನ್ನು ಸಂಪರ್ಕಿಸಬೇಕು.
ಟ್ವಿಟರ್:
ವಿಶ್ವದಲ್ಲಿ ಮತ್ತೊಂದು ಜನಪ್ರಿಯ ಸಾಮಾಜಿಕ ಜಾಲತಾಣವೆಂದರೆ ಟ್ವಿಟರ್. ಸಾವಿನ ಬಳಿಕ ಖಾತೆ ಯಾರು ಮುಂದುವರಿಸಿಕೊಂಡು ಹೋಗಬಹುದು ಎನ್ನುವ ಬಗ್ಗೆ ಯಾವುದೇ ನಿಯಮವಿಲ್ಲ. ಆದರೆ ಮೃತನ ಕುಟುಂಬದವರು ಖಾತೆ ಮುಚ್ಚಬೇಕೆಂದು ಟ್ವಿಟರ್ಗೆ ಮನವಿ ಮಾಡಿಕೊಳ್ಳುವ ಅವಕಾಶವಿದೆ. ಖಾತೆದಾರನ ಕುಟುಂಬದವರು ಎಂದು ದೃಢಪಟ್ಟ ಬಳಿಕವಷ್ಟೇ ಆ ಖಾತೆಯ ಪೋಸ್ಟ್, ಫೋಟೋ ಮತ್ತು ಖಾತೆ ತೆಗೆದುಹಾಕಲಾಗುವುದು. ಇದಕ್ಕೆ ಮರಣಪ್ರಮಾಣ ಪತ್ರ ಸಲ್ಲಿಸುವುದು ಅತೀ ಅಗತ್ಯ.