5 ಕೋಟಿ ಲಾಟರಿ ಗೆದ್ದ 88 ವರ್ಷದ ವೃದ್ಧ!

ಪಂಜಾಬ್: ದೇರಾಬಸ್ಸಿಯಲ್ಲಿ 88 ವರ್ಷದ ವ್ಯಕ್ತಿಯೊಬ್ಬರು ಲಾಟರಿ ಗೆದ್ದಿದ್ದಾರೆ. 5 ಕೋಟಿಯ ಲಾಟರಿ ಗೆದ್ದ ನಂತರ ಅವರು ತುಂಬಾ ಸಂತೋಷಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಲಾಟರಿ ಗೆದ್ದ ದ್ವಾರಕಾ ದಾಸ್, ಕಳೆದ 35-40 ವರ್ಷಗಳಿಂದ ಲಾಟರಿ ಖರೀದಿ ಮಾಡುತ್ತಿದ್ದೇನೆ.ಈಗ ಅದೃಷ್ಟ ಒಳಿದಿದೆ ಎಂದು ಹೇಳಿದ್ದಾರೆ.

ಲಾಟರಿ ನಿರ್ದೇಶಕ ಕರಮ್ ಸಿಂಗ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಘೋಷಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದ್ವಾರಕಾ ದಾಸ್ ಪ್ರಥಮ ಬಹುಮಾನ 5 ಕೋಟಿ ರೂ.ಗೆದ್ದುಕೊಂಡಿದ್ದಾರೆ. ಅವರಿಗೆ ನಿಗದಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 30ರಷ್ಟು ತೆರಿಗೆಯನ್ನು ಕಡಿತಗೊಳಿಸಿ ಗೆದ್ದ ಹಣ ನೀಡಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್