ಪುತ್ತೂರು;ಮಮತಾ ರೈ ಎಂಬವರ ಕಾಲಿಗೆ ಹಾವು ಕಚ್ಚಿದಾಗ ಮಗಳು ರಕ್ತ ಹೀರಿ ತಾಯಿಯನ್ನು ರಕ್ಷಣೆ ಮಾಡಿದ ಘಟನೆ ಬೆನ್ನಲ್ಲೇ ಕಚ್ಚಿರುವ ಹಾವು ನಾಗರ ಹಾವು ಅಲ್ಲ ಎಂದು ವೈದ್ಯರು ಹೇಳಿರುವ ಬಗ್ಗೆ ವರದಿಯಾಗಿದೆ.
ಪರಿಶೀಲನೆ ಬಳಿಕ ಮಹಿಳೆಗೆ ಕಚ್ಚಿರುವುದು ನಾಗರ ಹಾವು ಅಲ್ಲ ಮಲಬಾರ್ ಪಿಟ್ ವೈಪರ್ ಎಂದು ತಿಳಿದು ಬಂದಿದೆ.ವಿಷಕಾರಿ ಆಗಿರುವ ಈ ಹಾವು ಬಹಳ ನಂಜುಕಾರಿ. ಈ ಹಾವಿನ ಕಡಿತದಿಂದ ಸಾವು ಸಂಭವ ಕಡಿಮೆಯಾದರೂ ಹಾವು ಕಡಿದ ಜಾಗದಲ್ಲಿ ನಂಜು ಊತ ಏರ್ಪಡುತ್ತದೆ ಎಂದು
ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.
ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಘಟನೆ ನಡೆದಿದ್ದು, ಮೊದಲು ನಾಗರಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಬಾಯಿಯಿಂದ ವಿಷ ಹೀರಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಳು ಎಂದು ಸುದ್ದಿಯಾಗಿತ್ತು.
ಶ್ರಮ್ಯಾ ರೈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.ಆದರೆ ಹಾವು ಕಚ್ಚಿದಾಗ ವಿದ್ಯಾರ್ಥಿನಿ ಅನುಸರಿಸಿದ ವಿಧಾನ ಅಪಾಯಕಾರಿ ಎನ್ನುವುದು ತಜ್ಞರ ಅಭಿಪ್ರಾಯ.
ಮಲಬಾರ್ ಪಿಟ್ ವಿಷಕಾರಿಯ ಜೊತೆಗೆ ಬಹಳ ನಂಜುಕಾರಿ. ಕಚ್ಚಿದ ಜಾಗಕ್ಕೆ ಸರಿಯಾಗಿ ಚಿಕಿತ್ಸೆಯಾಗದಿದ್ದರೆ ಆ ಭಾಗ ಕೊಳೆಯುವ ಸಾಧ್ಯತೆಯೂ ಹೆಚ್ಚು. ಮಗಳು ಬಾಯಿಯಿಂದ ಹೀರಿ ವಿಷ ತೆಗೆದಿರುವ ಹಿನ್ನೆಲೆ ಪರೀಕ್ಷೆ ಮಾಡಿಸುವಂತೆಯೂ ತಜ್ಞರು ಸಲಹೆ ನೀಡಿದ್ದಾರೆ.