ಶಾಲಾ ಬಾಲಕನ ಬ್ಯಾಗ್ ನಲ್ಲಿ ಹಾವು ಪತ್ತೆ

ಶಿವಮೊಗ್ಗ;ಶಾಲಾ ಬಾಲಕನ ಬ್ಯಾಗ್ ನಲ್ಲಿ ಹಾವು ಪತ್ತೆಯಾದ ಘಟನೆ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗ್‌ನಲ್ಲಿ ಹಾವು ಪತ್ತೆಯಾಗಿದೆ.ನಿನ್ನೆ ಬೆಳಿಗ್ಗೆ ತರಗತಿ ಪ್ರಾರಂಭವಾದಾಗ ಶಿಕ್ಷಕರು ಪಾಠ ಓದಲು ಬ್ಯಾಗ್‌ನಿಂದ ಪುಸ್ತಕ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.

ವಿದ್ಯಾರ್ಥಿ ಭುವನ್‌ ಪುಸ್ತಕ ತೆಗೆಯಲು ಮುಂದಾದಾಗ ಬ್ಯಾಗ್‌ನಲ್ಲಿ ಹಾವು ಮಲಗಿರುವುದನ್ನು ಕಂಡು ಸಹಪಾಠಿಗಳಿಗೆ ಮತ್ತು ಶಿಕ್ಷಕರಿಗೆ ವಿಷಯ ತಿಳಿಸಿದ್ದಾನೆ.

ಶಿಕ್ಷಕರು ಬ್ಯಾಗ್‌ನ್ನು ಶಾಲಾ ಕೊಠಡಿಯಿಂದ ಹೊರತಂದು ತೆರೆದು ನೋಡಿದಾಗ ಹಾವು ಇರುವುದು ಕಂಡುಬಂದಿದೆ. ನಂತರ ಪಾಲಕರನ್ನು ಕರೆಸಿ ಬ್ಯಾಗ್‌ನಲ್ಲಿದ್ದ ನಾಗರಹಾವನ್ನು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.

ಟಾಪ್ ನ್ಯೂಸ್