ಹಾವು ಕಚ್ಚಿ ಯುವಕನ ಸ್ಥಿತಿ ಗಂಭೀರ; ಯುವಕ ಧರಿಸಿದ್ದ ಹೆಲ್ಮೆಟ್ ನಲ್ಲಿದ್ದ ಹಾವು; ಶಾಕಿಂಗ್ ಘಟನೆ ವರದಿ

ಯುವಕನೋರ್ವ ಧರಿಸಿದ್ದ ಹೆಲ್ಮೆಟ್ ನಲ್ಲಿ ವಿಷಕಾರಿ ಹಾವು ಅವಿತಿದ್ದು, ಬೈಕ್ ಚಲಾಯಿಸುವಾಗ ವಿಷಕಾರಿ ಹಾವು ಕಡಿದರೂ ಯುವಕ ಪವಾಡಸದೃಶವಾಗಿ ಪಾರಾಗಿರುವ ಘಟನೆ ಕೇರಳದ ಕೊಯಿಕ್ಕೋಡ್​ ಜಿಲ್ಲೆಯ ಕೊಯಿಲಾಂಡಿಯಲ್ಲಿ ನಡೆದಿದೆ.

ರಾಹುಲ್​ (30) ಅದೃಷ್ಟಾವಶಾತ್ ಪ್ರಾಣಾಪಾಯದಿಂದ ಪಾರಾದ ಯುವಕ.

ರಾಹುಲ್ ನಡುವತ್ತೂರಿನ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ.ಕಳೆದ ಶುಕ್ರವಾರ ಬೆಳಗ್ಗೆ ಕಚೇರಿಯಿಂದ ತುರ್ತು ಕರೆ ಬಂತೆಂದು ರಾಹುಲ್ ಧಾವಂತದಲ್ಲಿ ಬೈಕ್​ನಲ್ಲಿ ಇಟ್ಟಿದ್ದ ಹೆಲ್ಮೆಟ್ ನ್ನು ಪರಿಶೀಲನೆಯೂ ಮಾಡದೇ ಹಾಕಿಕೊಂಡು ಆಫೀಸ್​ಗೆ ಹೋಗಿದ್ದಾನೆ.

ಮನೆಯಿಂದ ಸುಮಾರು 5 ಕಿಮೀ ಸವಾರಿ ಮಾಡಿದ್ದರು.ಈ ವೇಳೆ ಇದ್ದಕ್ಕಿದ್ದಂತೆ ರಾಹುಲ್ ಅವರ ತಲೆಯ ಬಲಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ.ಅದನ್ನು ಸಹಿಸಲಾಗದ ರಾಹುಲ್, ಬೈಕ್ ನಿಲ್ಲಿಸಿ ಹೆಲ್ಮೆಟ್ ತೆಗೆದು ಕನ್ನಡಿಯಲ್ಲಿ ನೋಡುವಾಗ ಆತನಿಗೆ ಶಾಕ್​ ಕಾದಿತ್ತು.ಅವನ ತಲೆಯ ಸುತ್ತಲೂ ಉದ್ದವಾದ ಹಾವು ಸುತ್ತಿಕೊಂಡಿರುವುದನ್ನು ನೋಡಿದ್ದಾನೆ.

ಹಾವನ್ನು ಬಿಡಿಸಲು ನಾನು ಬಲವಾಗಿ ತಲೆ ಅಲ್ಲಾಡಿಸಿದೆ. ಅದು ನೆಲದ ಮೇಲೆ ಬಿದ್ದಿತು ಮತ್ತು ಓಡಿತು ಎಂದು ರಾಹುಲ್ ಹೇಳಿದ್ದಾರೆ.

ಅಲ್ಲಿ ಇದ್ದ ಸ್ಥಳಿಯರು ನನ್ನನ್ನ ಕೊಯಿಲಾಂಡಿ ತಾಲೂಕು ಆಸ್ಪತ್ರೆಯ ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದು ಮಾತ್ರ ನನಗೆ ನೆನಪಿದೆ ಎಂದು ರಾಹುಲ್​ ತಿಳಿಸಿದ್ದಾರೆ.

ದಾರಿಹೋಕರು ಮತ್ತು ಸ್ಥಳೀಯ ನಿವಾಸಿಗಳು ರಾಹುಲ್​ರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರಿಗೆ ಆಯಂಟಿ ಸ್ನೇಕ್​ ವೆನಮ್​(ಎಎಸ್​ವಿ) ಮದ್ದು ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ವೈದ್ಯರ ಸತತ ಪ್ರಯತ್ನದಿಂದ ರಾಹುಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟಾಪ್ ನ್ಯೂಸ್