ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತ್ಯು

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತ್ಯು

ಹರ್ಯಾಣ;ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರು 42 ವರ್ಷ ವಯಸ್ಸಿನವರಾಗಿದ್ದರು ಮತ್ತು ಟಿಕ್-ಟಾಕ್ ತಾರೆಯಾಗಿದ್ದಾರು ಮತ್ತು ನಟಿಯಾಗಿದ್ದರು.

ಕೆಲ ಸಿಬ್ಬಂದಿಯೊಂದಿಗೆ ಗೋವಾಕ್ಕೆ ತೆರಳಿದ್ದ ಆಕೆಗೆ ನಿನ್ನೆ ರಾತ್ರಿ ಹೃದಯಾಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಸೋನಾಲಿ ಕಳೆದ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಮುಂಬರುವ ಆದಂಪುರ ಚುನಾವಣೆಗೆ ಸೋನಾಲಿ ಕೂಡ ಬಿಜೆಪಿಯಿಂದ ಟಿಕೆಟ್ ಕೇಳುತ್ತಿದ್ದರು.

ಸೋನಾಲಿ ಫೋಗಟ್ ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಅವರು ಹಿಸಾರ್‌ನಿಂದ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು.

ಮುಖ್ಯವಾಗಿ,ಸಾವಿಗೆ ಕಾರಣವನ್ನು ಹೃದಯಾಘಾತ ಎಂದು ಹೇಳಲಾಗಿದೆ ಆದರೆ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸರು‌ ಹೇಳಿದರು.

ಬಾಂಬೋಲಿಮ್‌ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಅವರು ನಿಧನರಾಗಿದ್ದಾರೆ,ಅವರು ಗೋವಾದಲ್ಲಿದ್ದಾರೆ ಎಂದು ನನಗೆ ಮಾಹಿತಿ ನೀಡಲಾಗಿದೆ ಎಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಓ ಪಿ ಧಂಕರ್ ಹೇಳಿದ್ದಾರೆ.

ಟಾಪ್ ನ್ಯೂಸ್