ರೇಪ್ & ಮರ್ಡರ್ ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ ಅಧಿಕಾರಿಗಳು
ಉತ್ತರಪ್ರದೇಶ;19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಆರೋಪಿಯ ಮನೆಯನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಧ್ವಂಸಗೊಳಿಸಿದ್ದಾರೆ.
ಸೋನು ಅಲಿಯಾಸ್ ಸಿಕಂದರ್ ಖಾನ್ ಎಂಬಾತನ ಮನೆ ಧ್ವಂಸಗೊಳಿಸಲಾಗಿದೆ.
ವರದಿಗಳ ಪ್ರಕಾರ, ಜೂನ್ 22 ರಂದು ರಾಧಾನಗರ ಪ್ರದೇಶದ 19 ವರ್ಷದ ಯುವತಿ ತನ್ನ ಕುಟುಂಬದೊಂದಿಗೆ ತನ್ನ ಸೋದರಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ಬಿಂಡ್ಕಿ ಕೊಟ್ವಾಲಿಗೆ ಬರುತ್ತಿದ್ದಳು
ಆರೋಪಿ ಸಿಕಂದರ್ ಖಾನ್ ಅಲ್ಲಿ ಯುವತಿಯನ್ನು ಅಪಹರಿಸಿ 500 ಮೀಟರ್ ದೂರದಲ್ಲಿದ್ದ ಮನೆಗೆ ಕರೆದೊಯ್ದು, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಮೇಲಿನಿಂದ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ.
ಜೂನ್ 23 ರಂದು ಮುಂಜಾನೆ ಫರೀದ್‌ಪುರದಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಬಾಲಕಿಯನ್ನು ಪತ್ತೆ ಮಾಡಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಕಾನ್ಪುರ ಹಾಲೆಟ್ ಆಸ್ಪತ್ರೆಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಗೆ ದಾಖಲಿಸಲಾಯಿತು ಆದರೆ ಆಕೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ.
ಫತೇಪುರ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಆರೋಪಿಯ ಮನೆಯನ್ನು ಕೆಡವಿದ್ದಾರೆ.ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.