ಮನೆಯ ಬೆಡ್‍ರೂಮ್‍ನಲ್ಲಿ ಅಳವಡಿಸಿದ್ದ AC ಸ್ಪೋಟ, ನಿದ್ರೆಯಲ್ಲಿದ್ದ ತಾಯಿ & ಇಬ್ಬರು ಮಕ್ಕಳು ಸಜೀವ ದಹನ

ರಾಯಚೂರು;ಮನೆಯ ಬೆಡ್‍ರೂಮ್‍ನಲ್ಲಿ ಅಳವಡಿಸಿದ್ದ AC ಸ್ಪೋಟಗೊಂಡು ಸಂಭವಿಸಿದ ಅವಘಡದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ.

ರಾಯಚೂರಿನಲ್ಲಿ ಇಂಜಿನಿಯರ್ ಆಗಿರುವ ಸಿದ್ದಲಿಂಗಯ್ಯ ಅವರ ಪತ್ನಿ ರಂಜಿತಾ(33), ಪುತ್ರಿಯರಾದ ಮೃದುಲ(13) ಹಾಗೂ ತಾರುಣ್ಯ(5) ಮೃತ ದುರ್ದೈವಿಗಳು.

ನಿನ್ನೆ ರಾತ್ರಿ ಮಲಗುವಾಗ ಎಸಿ ಆನ್ ಮಾಡಿದ್ದರು.ನಿದ್ರೆಯಲ್ಲಿದ್ದಾಗ ಎಸಿ ಸ್ಫೋಟಗೊಂಡು ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದೆ.ಇದರಿಂದಾಗಿ ತಾಯಿ ಮತ್ತು ಮಕ್ಕಳು ಸಜೀವವಾಗಿ ದಹನಗೊಂಡಿದ್ದಾರೆ.

ಮಂಡ್ಯ ಮೂಲದವರಾದ ಇವರು ಶಕ್ತಿನಗರದ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಸಿದ್ದಲಿಂಗಯ್ಯ ಅವರು ರಾತ್ರಿಪಾಳಯಕ್ಕೆ ಕೆಲಸಕ್ಕೆ ಹೋಗಿದ್ದರು ಈ ವೇಳೆ ಪತ್ನಿ ಹಾಗೂ ಮಕ್ಕಳು ಮಾತ್ರ ಇದ್ದರು.

ಈ ಕುರಿತು ಶಕ್ತಿನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com