ವಿಜಯಪುರ:5ನೇ ತರಗತಿ ವಿದ್ಯಾರ್ಥಿನಿ ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚುನಾವಣೆಗಾಗಿ ನೀಡಿರುವ ಘಟನೆ ಸಿಂಧಗಿ ಪಟ್ಟಣದಲ್ಲಿ ನಡೆದಿದೆ.
5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಾಳೆ.
ತನಗೆ ಪಾಕೆಟ್ ಮನಿ ರೂಪದಲ್ಲಿ ನೀಡಿದ್ದ ಹಣವನ್ನು ಕುಮಾರಿ ಜಿಯಾ ಕೂಡಿಟ್ಟಿದ್ದಳು.ಹೀಗೆ ಕೂಡಿಟ್ಟ 5 ಸಾವಿರ ರೂ.ಹಣವನ್ನು ವಿಜಯಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದ ವೇದಿಕೆಯಲ್ಲಿ ಗೆಲುವಿಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾಳೆ.