ಆರೆಸ್ಸೆಸ್ ಬ್ಯಾನ್ ಕುರಿತ ಚರ್ಚೆ; ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಬೆಂಗಳೂರು:ಆರೆಸ್ಸೆಸ್ ಅಥವಾ ಬಜರಂಗದಳ ಅಥವಾ ಯಾವುದೇ ಕೋಮುವಾದಿ ಸಂಘಟನೆಯಾಗಿರಲಿ, ನೈತಿಕ ಪೊಲೀಸ್ ಗಿರಿಯಲ್ಲಿ ತೊಡಗುವ ಸಂಘಟನೆಗಳನ್ನು ನಿಷೇಧಿಸಲು ಹಿಂಜರಿಯುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಇತ್ತೀಚಿಗೆ ಹೇಳಿಕೆ ನೀಡಿದ್ದರು.ಇದು ಬಿಜೆಪಿ ನಾಯಕರ ವಿರೋಧಕ್ಕೆ ಕಾರಣವಾಗಿತ್ತು.ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಹಲವು ನಾಯಕರು ಹೇಳಿಕೆಯನ್ನು‌ ಕೊಟ್ಟಿದ್ದರು.

ಕಾಂಗ್ರೆಸ್ಗೆ ಧೈರ್ಯವಿದ್ದರೆ ಆರ್ಎಸ್ಎಸ್ ನಿಷೇಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದರು. ಆರೆಸ್ಸೆಸ್ ಅಥವಾ ಬಜರಂಗದಳವನ್ನು ನಿಷೇಧಿಸುವ ಪ್ರಯತ್ನ ಮಾಡಿದರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಆರ್ಎಸ್ಎಸ್ನ ಒಂದು ಶಾಖೆ ಮುಚ್ಚಿದರೆ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎಲ್ಲಿಯೂ ಇರಲ್ಲ ಎಂದು ಆರ್ .ಅಶೋಕ್ ಹೇಳಿದ್ದರು.

ಈ ಬಗ್ಗ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶನಿವಾರ ಅಂತಹ ಯಾವುದೇ ಹೇಳಿಕೆಗಳನ್ನು ಪಕ್ಷದಿಂದ ನೀಡಿಲ್ಲ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಆರ್ ಎಸ್ ಎಸ್ ನಿಷೇಧಿಸುವ ಬಗ್ಗೆ ಪಕ್ಷದಿಂದ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಅಥವಾ ಬಜರಂಗದಳ ಅಥವಾ ಯಾವುದೇ ಕೋಮುವಾದಿ ಸಂಘಟನೆಯಾಗಿರಲಿ, ನೈತಿಕ ಪೊಲೀಸ್ ಗಿರಿಯಲ್ಲಿ ತೊಡಗುವ ಸಂಘಟನೆಗಳನ್ನು ನಿಷೇಧಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರ ನೀಡಿದ್ದರು.

ಒಂದೇ ಒಂದು ಬಾರಿ ಶಾಂತಿ ಕದಡುವ ಕೆಲಸ ಮಾಡಿ ನೋಡಿ ಸಂವಿಧಾನದ ಶಕ್ತಿಯನ್ನು‌ ನಾವು ತೋರಿಸುತ್ತೇವೆ ಎಂದು ಎಚ್ಚರಿಕೆಯನ್ನು ಪ್ರಿಯಾಂಕ ಖರ್ಗೆ ನೀಡಿದ್ದರು.

ಟಾಪ್ ನ್ಯೂಸ್