ವೈರಲ್ ವಿಡಿಯೋ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ..

ಬೆಂಗಳೂರು;ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮಹಿಳಾ
ಸಮಾವೇಶದಲ್ಲಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು.

ಬಾಗಲಕೋಟೆಯಲ್ಲಿ ವಿಡಿಯೋ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಟ್ರೋಲ್ ಆಗಿರುವ ವಿಡಿಯೋ ಚರ್ಚೆ ಮಾಡಬಾರದು. ಸಮಾಜಕ್ಕೆ ಯಾವುದು ಅಗತ್ಯ ಇದೆಯೋ ಅದರ ಬಗ್ಗೆ ಚರ್ಚೆ ಮಾಡಬೇಕು. ನನ್ನ ಬಗ್ಗೆ ಋಣಾತ್ಮಕ ವಿಚಾರಗಳನ್ನು ಹಬ್ಬಿಸುವ ಯತ್ನ ನಡೆದಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾದ್ಯಮ ಬಳಕೆಯ ಸ್ವಾತಂತ್ರ್ಯ ಎಲ್ಲರಿಗು ಇದೆ.ನಿಮ್ಮ ಸ್ವಾತಂತ್ರ್ಯಕ್ಕೆ ನಾನು ಅಡ್ಡಿ ಪಡಿಸುವುದಿಲ್ಲ. ಅದೇ ರೀತಿ ನನ್ನ ಸ್ವಾಭಿಮಾನಕ್ಕೆ ಅವಮಾನ ಮಾಡಿದರೆ ಅದನ್ನು ನಾನು ಪ್ರಶ್ನೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಟಾಪ್ ನ್ಯೂಸ್