ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಅವರ ಪ್ರತಿಕ್ರಿಯೆಗೆ ಕಕ್ಕಾಬಿಕ್ಕಿಯಾದ ಪತ್ರಕರ್ತ
ಬೆಂಗಳೂರು;ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೀರಂತೆ ನಿಜಾನ?ಎಂದು ಪ್ರಶ್ನೆ ಕೇಳಿದ ವರದಿಗಾರನಿಗೆ ಮಾಜಿ ಸಿಎಂ ಯಾವನಯ್ಯ ನೀನು ಕೇಳೋಕೆ?ನೀನು ಮಾಂಸ ತಿನ್ನಲ್ವ ಎಂದು ಪ್ರಶ್ನಿಸಿದ್ದು ವರದಿಗಾರ ಕಕ್ಕಾಬಿಕ್ಕಿಯಾದ ಪ್ರಸಂಗ ನಡೆದಿದೆ.
ನಾನು ಮಾಂಸಹಾರಿ ಮಾಂಸ ತಿನ್ನುತ್ತೇನೆ,ನೀನು ಮಾಂಸಹಾರಿಯಾದರೆ ಮಾಂಸ ತಿನ್ನುತ್ತಿ ಅದರಲ್ಲಿ ತಪ್ಪೇನಿದೆ?
ನಾನು ಮಧ್ಯಾಹ್ನ ಊಟ ಮಾಡಿ ಸಂಜೆ ದೇವಾಲಯಕ್ಕೆ ಹೋದರೆ ತಪ್ಪಾ?ಸಂಜೆ ನಾನು ಬಸವೇಶ್ವರ ದೇವಾಲಯಕ್ಕೆ ಹೋಗಿದ್ದು,ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು? ಹಿಂದಿನ ದಿನ ತಿಂದು ಹೋಗಬಹುದಾ? ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಾಲಯಕ್ಕೆ ಹೋಗಬಹುದಾ? ಬಿಜೆಪಿ ಯವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸ, ಶಾಂತವಾಗಿರುವ ಪ್ರದೇಶದಲ್ಲಿ ಬೆಂಕಿ ಹಾಕುವುದು, ವಿಷ ಹಾಕುವುದು ಬಿಜೆಪಿಯವರ ಕೆಲಸ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಕಾರಿನ ಮೇಲೆ ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ಅವನ ಕೈಯಲ್ಲಿ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ.ಜೀವಿಜಯ ಅವನು ಯಾರು ಅಂತ ಗೊತ್ತಿಲ್ಲ ಅನ್ನುತ್ತಾರೆ.ನೋಡೇ ಇಲ್ಲ ಅಂತಾನೆ,ಬಲತ್ಕಾರವಾಗಿ ಹೇಳಿಸಿದ್ದಾರೆ,ಸಂಪತ್ ಪಕ್ಕಾ ಆರ್ ಎಸ್ ಎಸ್ ಕಾರ್ಯಕರ್ತ.ಅವನ ಕೈಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ.
ಇನ್ನು ನಾನು ಯಾರಿಗೂ ಭಯಪಡುವ ಪ್ರಶ್ನೆ ಇಲ್ಲ.ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡವರು ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ.