ಬೆಂಗಳೂರು;ಇಂದಿನ ಸದನದಲ್ಲಿ ಎಚ್.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿ ಬೆಂಬಲ ಬೆಲ ಹೆಚ್ಚಳದ ಬಗ್ಗೆ ಚರ್ಚಿಸಲು ಕೊಬ್ಬರಿಯನ್ನೇ ಹಿಡಿದುಕೊಂಡು ಬಂದಿದ್ದು ಸದನದಲ್ಲಿ ನಗುವಿಗೆ ಕಾರಣವಾಗಿದೆ.
ಸದನ ಪ್ರಾರಂಭವಾಗುತ್ತಿದ್ದಂತೆಯೇ ಎಚ್.ಡಿ.ರೇವಣ್ಣ ಕೈಯಲ್ಲಿ ಕೊಬ್ಬರಿಯನ್ನು ಪ್ರದರ್ಶಿಸುತ್ತಾ ಎದ್ದು ನಿಂತು ಇದಕ್ಕೇನಾದರೂ ಮಾಡಿ ಎಂದರು.
ಈ ವೇಳೆ ಮಾತನಾಡಲು ಎದ್ದು ನಿಂತಿದ್ದ ಸಿಎಂ ಸಿದ್ದರಾಮಯ್ಯ, ಏ..ರೇವಣ್ಣ ಯಾವಗಲೂ ನಿಂಬೆಹಣ್ಣು ತರ್ತಾ ಇದ್ದೆ. ಇದೇನು ಕೊಬ್ಬರಿ ಹಿಡ್ಕೊಂಡು ಬಂದಿದ್ಯಾ? ರೇವಣ್ಣ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಈ ವೇಳೆ ಕೆಲ ಶಾಸಕರು ನಿಂಬೆಹಣ್ಣಿನ ಬದಲಾಗಿ ಕೊಬ್ಬರಿ ತಂದಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.