ಒಂದೇ ಕುಟುಂಬದ ಮೂವರು ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ

ತುಮಕೂರು:ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಡಿತನಹಳ್ಳಿ ಬಳಿ ನಡೆದಿದೆ.

ಸಿದ್ದಗಂಗಯ್ಯ, ಸುನಂದಮ್ಮ, ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ ನಿವೃತ್ತಿ ಹೊಂದಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಿದ್ದಗಂಗಯ್ಯ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಟೀ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.

ಸಾಲಗಾರರ ಕಾಟಕ್ಕೆ ಬೇಸತ್ತು ಇಡೀ ಕುಟುಂಬ ಸೋಮವಾರ ಬೆಳಗಿನ ಜಾವವೇ ಆಟೋದಲ್ಲಿ ಪಂಡಿತನಹಳ್ಳಿ ರೈಲ್ವೆ ಬಳಿ ಬಂದಿದ್ದಾರೆ. ಬಳಿಕ ರೈಲ್ವೆಗೆ ಹಳಿ ಮೇಲೆ ಅಡ್ಡಲಾಗಿ ಮಲಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈಲು ದೇಹದ ಮೇಲೆ ಹರಿದ ಕಾರಣ ಮೂವರ ಮೃತದೇಹ ರೈಲ್ವೇ ಹಳಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು