ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಕ್ಕೆ ಬಾರಿಸಿದ ಸಿದ್ದರಾಮಯ್ಯ; ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ?

ಬೆಂಗಳೂರು;ಕಾಂಗ್ರೆಸ್ ಕಾರ್ಯಕರ್ತ ಮತ್ತು ಶಾಸಕ ರಾಮಪ್ಪ
ಅಭಿಮಾನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದಾರೆ.

ದಾವಣಗೆರೆ ಹರಿಹರ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕ ರಾಮಪ್ಪ ಆಕಾಂಕ್ಷೆ ಹೊಂದಿದ್ದಾರೆ‌‌. ಇದಕ್ಕೆ ಅವರ ಬೆಂಬಲಿಗರು ಹಿರಿಯ ನಾಯಕರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ.

ರಾಮಪ್ಪ ಅವರ ಬೆಂಬಲಿಗರು ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಯ್ಯರ ಮನೆ‌ಮುಂದೆ ಬಂದು ಅವರನ್ನು ಸುತ್ತುವರೆದು ತಮ್ಮ ನಾಯಕನಿಗೆ ಕಾಂಗ್ರೆಸ್​ ಟಿಕೆಟ್​ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.ಸಿದ್ದರಾಮಯ್ಯ ಶಾಸಕ ರಾಮಪ್ಪ ಅವರಿಗೆ ಕಾಯುವಂತೆ ಸೂಚಿಸಿದ್ದಾರೆ.

ರಾಮಪ್ಪ ಅಭಿಮಾನಿಗಳು ಸಿದ್ದರಾಮಯ್ಯ ಅವರ ಮನೆ ಮುಂದೆ ಜಮಾಯಿಸಿದ್ದರಿಂದ ಭಾರೀ ತಳ್ಳಾಟ ಹಾಗೂ ನೂಕಾಟ ಉಂಟಾಗಿದೆ. ಈ ವೇಳೆ ರಾಮಪ್ಪ ಬೆಂಬಲಿಗರನ್ನು ಸಮಾಧಾನಗೊಳಿಸಲು ಯತ್ನಿಸಿದ ಸಿದ್ದರಾಮಯ್ಯ ಟಿಕೆಟ್ ಗೆ ಸರ್ವೆ ರಿಪೋರ್ಟ್ ಬರಲಿ ಎಂದು ಹೇಳಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯನವರು ಹೊರಡುವಾಗ ಮತ್ತೆ ತಳ್ಳಾಟ ನೂಕಾಟ ಆರಂಭವಾಗಿದೆ. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ತಳ್ಳಾಡಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದೀಗ ಸಿದ್ದರಾಮಯ್ಯ ಕೈ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಪ್ ನ್ಯೂಸ್