ಶಾಂತಿ ಸುವ್ಯವಸ್ಥೆಗ ಧಕ್ಕೆ ಸಾಧ್ಯತೆ ಹಿನ್ನೆಲೆ ಶಿವಮೊಗ್ಗದಿಂದ ಇಬ್ಬರು ಗಡಿಪಾರು
ಶಿವಮೊಗ್ಗ:ಗಣೇಶ ಹಬ್ಬ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡಲು ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ.
ಆಶ್ರಯ ಬಡಾವಣೆಯ ಶಮಂತ ನಾಯ್ಕ (29)ಮತ್ತು ಸಂದೀಪ್ ಕುಮಾರ್(29) ಗಡಿಪಾರು ಆದವರು.
ಶಮಂತ್ ಮೇಲೆ 15 ಮತ್ತು ಸಂದೀಪ್ ಮೇಲೆ 10 ಪ್ರಕರಣಗಳಿದ್ದು ಇಬ್ಬರೂ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ಗಳಾಗಿದ್ದಾರೆ.
ಇವರು ಗಣಪತಿ ಹಬ್ಬದ ಸಮಯದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟು ಮಾಡವ ಸಾಧ್ಯತೆ ಇದೆ. ಇದರರಿಂದಾಗಿ ಇಬ್ಬರನ್ನು ಗಡಿಪಾರು ಮಾಡುವಂತೆ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳಿಗೆ ವರದಿ ನೀಡಿದ್ದರು.
ಅದರಂತೆ ಗುರುವಾರದಿಂದ ಸೆಪ್ಟೆಂಬರ್ 25ರವರೆಗೆ ಶಿವಮೊಗ್ಗ ಉಪ ವಿಭಾಗ ಸರಹದ್ದಿನಿಂದ ಇಬ್ಬರನ್ನು ಗಡಿಪಾರು ಮಾಡಿ ಆದೇಶಿಸಲಾಗಿದೆ.