ಕೇರಳ;ಸ್ತ್ರೀ ಶಕ್ತಿ ಲಾಟರಿಯ 75 ಲಕ್ಷ ರೂ.ಗೆದ್ದ ರಸ್ತೆ ಕೆಲಸಕ್ಕೆ ಬಂದಿದ್ದ ಯುವಕ;ಬೀದಿ ಬದಿ ಅಲೆದಾಡುತ್ತಿದ್ದವನ ಜೀವನವೇ ಬದಲು! ಲಾಟರಿ ಗೆದ್ದ ತಕ್ಷಣ ಹೆದರಿ ಈತ ಮಾಡಿದ್ದೇನು ಗೊತ್ತಾ?
ಪಶ್ಚಿಮ ಬಂಗಾಳದಿಂದ ಕೇರಳಕ್ಕೆ ರಸ್ತೆ ಕೆಲಸ ಮಾಡಲು ಬಂದ ಯುವಕನ ಅದೃಷ್ಟವೇ ಬದಲಾಗಿದ್ದು, ಕೇರಳದ ಸ್ತ್ರೀಶಕ್ತಿ ಲಾಟರಿಯಲ್ಲಿ ಭರ್ಜರಿ 75 ಲಕ್ಷ ರೂ.ಗೆದ್ದುಕೊಂಡಿದ್ದಾರೆ.
ಬಂಗಾಳದ ವಲಸೆ ಕಾರ್ಮಿಕ ಎಸ್ ಕೆ ಬದೇಶ್ ಅವರು ಕೇರಳದಲ್ಲಿ ಮಂಗಳವಾರ ಡ್ರಾ ಆದ ಸ್ತ್ರೀಶಕ್ತಿ ಲಾಟರಿಯಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.
ಸ್ತ್ರೀ-ಶಕ್ತಿ ಲಾಟರಿ ಬಂದ ತಕ್ಷಣ ಖುಷಿಯ ಜೊತೆಗೆ ಇಷ್ಟು ಮೊತ್ತದ ಟಿಕೆಟ್ ಯಾರಾದರೂ ಕದಿಯಬಹುದೆಂದು ಎಸ್ ಕೆ ಬದೇಶ್ ಭಯದಿಂದ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದಾರೆ.
ಕರ್ತವ್ಯ ನಿರತ ಪೊಲೀಸರು ಎಸ್ ಕೆ ಬದೇಶ್ನ್ನು ಸಮಾಧಾನ ಪಡಿಸಿ ಲಾಟರಿ ಚೀಟಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು ಬ್ಯಾಂಕ್‌ಗೆ ನೀಡಿ ಹಣ ಪಡೆಯುವಂತೆ ತಿಳಿಸಿದ್ದಾರೆ.ಪೊಲೀಸರು ಎಲ್ಲ ತರಹದ ಭದ್ರತೆಯನ್ನೂ ಆತನಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಎಸ್.ಕೆ.ಬದೇಶ್ ಅವರು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ವಲಸೆ ಕಾರ್ಮಿಕನಾಗಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು.
ಎರ್ನಾಕುಲಂನ ಚೊಟ್ಟಾನಿಕರದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಲಾಟರಿ ಅಂಗಡಿ ನೋಡಿ, ಟಿಕೆಟ್ ಖರೀದಿಸಿದ್ದರು.ಇದೀಗ ಲಾಟರಿ ಗೆದ್ದು ಬದೇಶ್ ಜೀವನವೇ ಬದಲಾದಂತಾಗಿದೆ.