ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ನಟಿಯ ಬಾಳಲ್ಲಿ ವಿಧಿಯ ಆಟ; ಪತಿ ಹೃದಯಾಘಾತದಿಂದ ಮೃತ್ಯು
ಚೆನ್ನೈ;ಚೆನ್ನೈ ಮೂಲದ ಫಿಟ್ನೆಸ್ ಮಾಡೆಲ್ ಮತ್ತು ಜನಪ್ರಿಯ ಕಿರುತೆರೆ ನಟಿ ಶ್ರುತಿ ಷಣ್ಮುಗ ಅವರ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ ಅವರ ಸಾವಿಗೆ ಹೃದಯ ಸ್ತಂಭನವೇ ಕಾರಣ ಎನ್ನಲಾಗಿದೆ.ಅರವಿಂದ್ ಶೇಖರ್, ತಮ್ಮ 30ನೇ ವರ್ಷದಲ್ಲಿ ಬುಧವಾರ ಹೃದಯ ಸ್ತಂಭನದಿಂದ ಮೃತಟಪಟ್ಟಿದ್ದಾರೆ.
ಎದೆನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅವರಿಗೆ ಶೀಘ್ರ ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಲಾಗಲಿಲ್ಲ.
ಅರವಿಂದ್ ಕಳೆದ ವರ್ಷ ಶೃತಿ ಷಣ್ಮುಗ ಅವರೊಂದಿಗೆ ಮದುವೆಯಾಗಿದ್ದರು.
ಶ್ರುತಿ ಅವರು ಭಾರತಿ ಕಣ್ಣಮ್ಮ, ನಾದಸ್ವರಂ, ವಾಣಿ ರಾಣಿ, ಕಲ್ಯಾಣ ಪರಿಸು ಮತ್ತು ಪೊನ್ನೂಂಜಾಲ್‌ಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಮತ್ತು ದಂಪತಿಗಳು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಸಕ್ರಿಯರಾಗಿದ್ದರು, ನಿಯಮಿತವಾಗಿ ರೀಲ್‌ಗಳು ಮತ್ತು ತಮಾಷೆಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು.