ಮುತಾಲಿಕ್ ಕಾರ್ಕಳದಲ್ಲಿ ಸ್ಪರ್ಧೆಗೆ ಕಾರಣವೇನು? ಮುತಾಲಿಕ್ ವಿರುದ್ಧ ತಿರುಗಿಬಿದ್ದ ಶ್ರೀರಾಮಸೇನೆಯ ನಾಯಕರು ಹೇಳಿದ್ದೇನು?

ಕಾರ್ಕಳ;ಕಾರ್ಕಳದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸ್ಪರ್ಧೆ ಘೋಷಣೆ ಬಳಿಕ ಇದೀಗ ಶ್ರೀರಾಮಸೇನೆಯೇ ಮುತಾಲಿಕ್ ಸ್ಪರ್ಧೆಗೆ ವಿರೋಧಿಸಿದೆ.

ಮುತಾಲಿಕ್ ಗೆಲ್ಲುವುದಿಲ್ಲ, ಸೋತ ನಂತರ ಅವರು ದುರಂತ ನಾಯಕರಾಗುತ್ತಾರೆ ಎಂದು ಶ್ರೀರಾಮ ಸೇನೆಯ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ಹೇಳಿದ್ದಾರೆ.

ಕಾರ್ಕಳದಲ್ಲಿ ಸುನಿಲ್ ಕುಮಾರ್‌ರಂತಹ ನಾಯಕರನ್ನು ಸೋಲಿಸಲು ಸಾಧ್ಯವಿಲ್ಲ, ಅವರ ವಿರುದ್ಧ ಸ್ಪರ್ಧಿಸುವುದು ಸರಿಯಲ್ಲ. ಮುತಾಲಿಕ್ ಅವರೇ ನೀವು ದುರಂತ ನಾಯಕರಾಗಬೇಡಿ,ಮಹಾರಾಷ್ಟ್ರದ ಶಿವಸೇನೆಯ ಬಾಳ್ ಠಾಕ್ರೆಯಂತೆ ನೀವು ಸಂಘಟನೆಯಲ್ಲಿಯೇ ಇದ್ದು ಬೇರೆಯವರನ್ನು ರಾಜಕೀಯದಲ್ಲಿ ಬೆಳೆಸಿ ಎಂದು ಹೇಳಿದ್ದಾರೆ.

ಕಾರ್ಕಳದ ಉದ್ಯಮಿ ಮತ್ತು ವಕೀಲರೊಬ್ಬರ ಕುಮ್ಮಕ್ಕಿನಿಂದ ಮುತಾಲಿಕ್ ಸುನಿಲ್ ಕುಮಾರ್ ಎದುರು ಸ್ಪರ್ಧೆಗಿಳಿಯುತಿದ್ದಾರೆ. ಸುನಿಲ್ ಕುಮಾರ್ ಮೇಲೆ ಉದ್ಯಮಿಯವರು ವೈಯುಕ್ತಿಕ ದ್ವೇಷಕ್ಕಾಗಿ ಮುತಾಲಿಕ್ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈಗ ಸಂಘಟನೆ ನಡುವೆ ಪರ ವಿರೋಧ ಚರ್ಚೆ ಆರಂಭವಾಗಿ ಸಂಘಟನೆಯೇ ವಿಭಜನೆಯಾಗುವ ಹಂತದಲ್ಲಿದೆ ಎಂದು ಮೋಹನ್ ಇದೇ ವೇಳೆ ಹೇಳಿದರು.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com