ಅಬಯಾ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಗೆ ಪ್ರವೇಶ ನಿರಾಕರಣೆ, ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ಶ್ರೀನಗರ; ಶಾಲೆಯೊಂದರ ವಿದ್ಯಾರ್ಥಿನಿಯರಿಗೆ “ಅಬಯಾ” (ಸಡಿಲವಾದ ಪೂರ್ಣ-ಉದ್ದದ ನಿಲುವಂಗಿಯನ್ನು) ಧರಿಸಿ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ ನಂತರ ಕಾಶ್ಮೀರದಲ್ಲಿ ರಾಜಕೀಯ ಗದ್ದಲ ಭುಗಿಲೆದ್ದಿದೆ ಮತ್ತು ಶಾಲೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆದಿದೆ.
ಹಳೆ ನಗರದ ಶ್ರೀನಗರದ ರೈನಾವಾರಿ ಪ್ರದೇಶದಲ್ಲಿರುವ ವಿಶ್ವ ಭಾರತಿ ಹೈಯರ್ ಸೆಕೆಂಡರಿ ಶಾಲೆಯ (ವಿಬಿಎಚ್‌ಎಸ್‌ಎಸ್) ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ಗಲಾಟೆ ಭುಗಿಲೆದ್ದಿದೆ.
ವಿಶ್ವಭಾರತಿ ಉಚ್ಚ ಮಾಧ್ಯಮಿಕ ವಿದ್ಯಾಲಯದಲ್ಲಿ ಅಬಯಾ (ಬುರ್ಖಾದಂತೆ ಹೋಲುವ ಉಡುಪು) ಮತ್ತು ಹಿಜಾಬ್ ಅನ್ನು ನಿಷೇಧಿಸಿದ್ದರಿಂದ ಮುಸಲ್ಮಾನ ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವರು ಶಾಲೆಯ ಪ್ರಾಚಾರ್ಯರ ಬಳಿ ಈ ಬಗ್ಗೆ ವಿಚಾರಣೆ ನಡೆಸುತ್ತಾ ಉತ್ತರ ನೀಡಲು ಹೇಳಿದ್ದಾರೆ.
ಪ್ರತಿಭಟಿಸುವ ವಿದ್ಯಾರ್ಥಿಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ವಿದ್ಯಾರ್ಥಿನಿಯೊಬ್ಬರು, ಅಬಯಾ ಧರಿಸಬೇಕಾದರೆ ನೀವು ಮದರಸಾಕ್ಕೆ ಹೋಗಿ ಎಂದು ಶಾಲೆಯಲ್ಲಿ ಹೇಳಿದ್ದರು, ಶಾಲೆಗೆ ಪ್ರವೇಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಾಂಶುಪಾಲ ಮೆಮ್ರೋಜ್ ಶಾಫಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಆರೋಪವನ್ನು ಅಲ್ಲಗಳೆಯುತ್ತಾರೆ ಮತ್ತು ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಅಬಯಾವನ್ನು ಹಾಕಬಹುದು ಎಂದು ತಿಳಿಸಲಾಗಿದೆ, ಆದರೆ ಅವರು ಅದನ್ನು ಆವರಣದೊಳಗೆ ತೆಗೆಯಬೇಕು ಎಂದು ಹೇಳಿದರು.
ನಾವು ಅವರಿಗೆ ಉದ್ದನೆಯ ಬಿಳಿ ಬಣ್ಣದ ಹಿಜಾಬ್ ಅಥವಾ ದೊಡ್ಡ ದುಪಟ್ಟಾವನ್ನು ಧರಿಸಲು ಹೇಳಿದ್ದೇವೆ, ಏಕೆಂದರೆ ಅದು ಶಾಲೆಯ ಉಡುಪಿನ ಭಾಗವಾಗಿದೆ. ಅವರು ವಿವಿಧ ವಿನ್ಯಾಸಗಳ ವರ್ಣರಂಜಿತ ಅಬಯಾಗಳನ್ನು ಧರಿಸುತ್ತಾರೆ, ಇದು ಶಾಲೆಯ ಡ್ರೆಸ್ ಕೋಡ್‌ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.