ದೇಶವನ್ನು ಬರ್ಬಾದ್ ಮಾಡಿ ಅವಿತುಕೊಂಡ ದೊರೆ;ಬದುಕಿಗೆ ದಾರಿ ತೋಚದೆ ದೇಶಬಿಟ್ಟು ಗಡಿದಾಟುತ್ತಿರುವ ಲಂಕಾ ಜನರು!

ಶ್ರೀಲಂಕಾವನ್ನು ಬರ್ಬಾದ್ ಮಾಡಿ ಅವಿತುಕೊಂಡ ಮಹಿಂದಾ ರಾಜಪಕ್ಸೆ; ಹಣೆಬರಹ ಎಂದು ದೇಶಬಿಟ್ಟು ಗಡಿದಾಟುತ್ತಿರುವ ಲಂಕಾ ಜನರು!

ಮಂಗಳೂರು: ಆರ್ಥಿಕ ಬಿಕ್ಕಟ್ಟಿಗೆ ತಲ್ಲಣಗೊಂಡಿರುವ ಶ್ರೀಲಂಕಾದಲ್ಲಿ ಜನ ಆಹಾರಕ್ಕೆ ಆಹಾಕಾರ, ಹಿಂಸೆ ಹಿನ್ನೆಲೆಯಲ್ಲಿ ಗಡಿದಾಟುತ್ತಿರುವ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ.

ಲಂಕಾ ದುಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿನ ಪ್ರಜೆ ಗಳು ಅಕ್ರಮವಾಗಿ ದಕ್ಷಿಣ ಭಾರತಕ್ಕೆ ಬರಲು ಯತ್ನಿಸುತ್ತಿರುವುದನ್ನು ಭಾರತೀಯ ಬೇಹುಗಾರಿಕಾ ವಿಭಾಗ ಪತ್ತೆ ಹಚ್ಚಿದೆ.

ಕರ್ನಾಟಕ ಸೇರಿದಂತೆ ದ. ಭಾರತದ ಕರಾವಳಿ ರಾಜ್ಯ ಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಲಭ್ಯ ಮಾಹಿತಿಯ ಪ್ರಕಾರ ತಮಿಳುನಾಡಿಗೆ ಈಗಾಗಲೇ ವಲಸಿಗರು ಬರತೊಡಗಿದ್ದಾರೆ. ಕೇರಳ, ಕರ್ನಾಟಕದ ಕರಾವಳಿಗೂ ಬರುವ ಸಾಧ್ಯತೆ ಇದೆ. ಇದರಿಂದ ಕಟ್ಟೆಚ್ವರ ವಹಿಸಲಾಗಿದೆ.

ಟಾಪ್ ನ್ಯೂಸ್