ಚಾಕು ಹಿಡಿದು ಬೆದರಿಸಿದ ದರೋಡೆಕೋರನನ್ನು ಅಂಗಡಿಯ ಮಾಲಕ ಉಪಾಯದಿಂದ ಅಂಗಡಿಯೊಳಗೆ ಬಂಧಿಸಿದ ಘನಟೆಯ ವಿಡಿಯೋ ವೈರಲ್ ಆಗಿದೆ.
ವೀಡಿಯೊವನ್ನು ಜೂನ್ 15 ರಂದು ಪೋಸ್ಟ್ ಮಾಡಲಾಗಿದೆ.ಆದರೆ ಘಟನೆ ಎಲ್ಲಿ ನಡೆದಿರುವುದು ಎಂದು ಸ್ಪಷ್ಟವಾಗಿಲ್ಲ.ವಿಡಿಯೋವನ್ನು ಸುಮಾರು 46,000 ಜನರು ವೀಕ್ಷಿಸಿದ್ದಾರೆ.ಜೊತೆಗೆ 1,100 ಕ್ಕೂ ಹೆಚ್ಚು ಲೈಕುಗಳನ್ನು ಕಾಣಬಹುದು.
ವೀಡಿಯೋಗೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅಂಗಡಿ ಮಾಲೀಕನ ಧೈರ್ಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ದರೋಡೆಕೋರ ಗ್ರಾಹಕನಂತೆ ಸಾಮಾಗ್ರಿ ಖರೀದಿಸಲು ಅಂಗಡಿಗೆ ಬಂದಿರುವುದನ್ನು ಕಾಣಬಹುದು.ಬಳಿಕ ಬಿಲ್ ಕೌಂಟರ್ಗೆ ಬಿಲ್ ಮಾಡಲು ಬಂದಿದ್ದಾನೆ.ಇದಕ್ಕಿದ್ದ ಹಾಗೆ ಜೇಬಿನಿಂದ ಚಾಕು ತೆಗೆದು ಬೆದರಿಸಿದ್ದಾನೆ.
ಈ ವೇಳೆ ಅಂಗಡಿ ಮಾಲೀಕ ಹೊರಗೆ ಓಡಿ ಅಂಗಡಿಯ ಬಾಗಿಲು ಹಾಕಿದ್ದಾನೆ.ದರೋಡೆಗೆ ಬಂದ ಕಳ್ಳ ತಪ್ಪಿಸಲು ಕೂಡ ಆಗದೆ ಬಾಗಿಲಿನ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬಾಗಿಲು ಎಳೆದು ಎಳೆದು ಕೊನೆಗೆ ದರೋಡೆಗೆ ಬಂದ ಕಳ್ಳ ಕಂಗಾಲಾಗಿದ್ದಾನೆ.ಈ ಕುರಿತ ವಿಡಿಯೋ ಇದೀಗ ನೆಟ್ಟಿನಲ್ಲಿ ಭಾರೀ ವೈರಲ್ ಆಗಿದೆ.