ಸಿಎಂ ಸಿದ್ದರಾಮಯ್ಯಗೆ ಹಾಡಿ ಹೊಗಳಿದ ಬಿಜೆಪಿ ಶಾಸಕ

ಬೆಂಗಳೂರು;ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ವಲಸೆ ಬಂದಿರುವ ಶಾಸಕ ಎಸ್​ಟಿ ಸೋಮಶೇಖರ್, ಬಹಿರಂಗ ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಡಿಹೊಗಳಿದ್ದಾರೆ.

ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸೋಮಶೇಖರ್, ಸಿದ್ದರಾಮಯ್ಯ ಅನುದಾನದಲ್ಲೇ ಬೆಳೆದು 2ನೇ ಬಾರಿ ಶಾಸಕನಾದೆ. ಬೇರೆ ಪಕ್ಷಕ್ಕೆ ಹೋದರೂ ಯಾವತ್ತೂ ಸಿದ್ದರಾಮಯ್ಯರನ್ನು ಮರೆತಿಲ್ಲ. ಹೇಳಿದಂತೆ, ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿಮಿಡಿತ ಸಿಎಂ ಸಿದ್ದರಾಮಯ್ಯಗೆ ಗೊತ್ತಿದೆ. ಸಿದ್ದರಾಮಯ್ಯ ರಾಜ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತಾರೆ ಎಂದು ​ ಹಾಡಿಹೊಗಳಿದರು.

ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು ಸಿಎಂ ಸಿದ್ದರಾಮಯ್ಯನವರು. 2013-18ರಲ್ಲಿ ಈ ಭಾಗದ ಶಾಸಕನಾಗಿದ್ದೆ.ಈ ಕ್ಷೇತ್ರದ ಅಭಿವೃದ್ಧಿಗೆ ಯಾವುತ್ತೂ ಸಹ ಇಲ್ಲ‌ ಅಂತ ಹೇಳಿಲ್ಲ.ರಾಜಕಾರಣ ಮಾಡದೆ ಪ್ರತೀ ಹಂತದಲ್ಲಿ ಕೋಟ್ಯಾಂತರ ರೂ.ಅನುದಾನ ನೀಡಿದ್ದಾರೆ.ಅವರ ಅನುದಾನದಲ್ಲಿ ಬೆಳೆದು ಎರಡನೇ ಬಾರಿಗೆ ಶಾಸಕನಾಗಿದ್ದೇನೆ. ಪಕ್ಷಾಂತರ ಹೋಗಿದ್ದರೂ ನಾನು ಯಾವತ್ತೂ ಸಿದ್ದರಾಮಯ್ಯರನ್ನು ಮರೆತಿರಲಿಲ್ಲ ​​ಎಂದು ಎಸ್​ಟಿ ಸೋಮಶೇಖರ್ ಹೇಳಿದ್ದಾರೆ.

ಭಾಷಣದಲ್ಲಿ ತಮ್ಮನ್ನು ಹಾಡಿ ಹೊಗಳಿದ ಎಸ್ ಟಿ ಸೋಮಶೇಖರ್ ಅವರ ಹೆಗಲ ಮೇಲೆ ಸಿದ್ದರಾಮಯ್ಯ ಕೈಹಾಕಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಟಾಪ್ ನ್ಯೂಸ್