ನಾನು ಬಜರಂಗದಳದ ಕಾರ್ಯಕರ್ತೆ, ತಾಕತ್ತಿದ್ದರೆ ನನ್ನನ್ನು ಬಂಧಿಸಿ- ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಶೋಭಾ ಏನೆಲ್ಲಾ ಹೇಳಿದ್ರು?

ಬೆಂಗಳೂರು;ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಭರವಸೆ ನೀಡಿರುವುದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಈ ಭರವಸೆ ಓದಿ ನನ್ನ ರಕ್ತ ಕುದಿಯುತ್ತಿದೆ. ನಾನೂ ಬಜರಂಗದಳ ಕಾರ್ಯಕರ್ತೆ, ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಹೇಳಿದ್ದಾರೆ.

ಪಿಎಫ್ ಐ ಸಂಘಟನೆಯನ್ನು ದೇಶಭಕ್ತ ಬಜರಂಗದಳಕ್ಕೆ ಹೋಲಿಸಿರುವುದು ಸರಿಯಲ್ಲ. ದೇಶದ ಹಿಂದು ಯುವಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವ ಬಜರಂಗದಳ ವಿರೋಧಿ ಎನಿಸಿದೆ ಎಂದು ಹೇಳಿದರು.

ಚುನಾವಣೆ ಪ್ರಚಾರ ಸಭೆಗಳಲ್ಲಿ ಬಜರಂಗದಳ ನಿಷೇಧದ‌ ಬಗ್ಗೆ ತಾಕತ್ತಿದ್ದರೆ ಮಾತನಾಡಿ. ಮುಸ್ಲಿಮರ ವೋಟುಗಳಿಂದ ಮಾತ್ರ ಗೆದ್ದು ಬನ್ನಿರಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಮುತ್ತಜ್ಜ, ಅಜ್ಜನ ಕಾಲದಲ್ಲಿ ಆರ್ ಎಸ್ ಎಸ್ ನಿಷೇಧಿಸಲಾಯಿತು. ನಂತರ ಏನಾಯಿತು ಎಂಬುದು ದೇಶಕ್ಕೆ ಗೊತ್ತಿದೆ.ಇದು ಆರ್ ಎಸ್‌ಎಸ್ ನ ಒಂದು ಭಾಗ ಎಂಬುದು ದೇಶಕ್ಕೆ ಗೊತ್ತಿದೆ. ಆರ್ ಎಸ್‌ಎಸ್ ನ ಒಂದು ಭಾಗ ಬಿಜೆಪಿ, ಮತ್ತೊಂದು ಭಾಗದಲ್ಲಿ ಎಬಿವಿಪಿ, ಬಜರಂಗದಳ, ವನವಾಸಿ ಕಲ್ಯಾಣ ಇನ್ನಿತರ ಸಂಘಟನೆಗಳಿವೆ. ಬಿಜೆಪಿ ಹಿಂದಿನಂತೆ ಸಣ್ಣ ಸಂಘಟನೆಯಲ್ಲ. ವಿಶ್ವದ ಅತಿದೊಡ್ಡ ಪಕ್ಷವಾಗಿದ್ದು, ಎಲ್ಲರೂ ಆಧರಿಸಿ ಗೌರವಿಸುವ ವಿಶ್ವ ನಾಯಕ ನರೇಂದ್ರ ಮೋದಿಯವರು ಇರುವ ಪಕ್ಷವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಚಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಹೇಳಿದೆ.

ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು‌ ಸಂಘಟನೆಗಳಿಗೆ ನಿಷೇಧ ಸೇರಿ ಕಾನೂನು ಕ್ರಮಕ್ಕೆ ಸರಕಾರ ಬದ್ಧವಾಗಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com