ಮಂಗಳೂರು; ಯುವಕನ ಕೊಲೆಯತ್ನ, ಆರೋಪಿಗಳ ಬಂಧನ

ಮಂಗಳೂರು;ಕಾವೂರು ಬಳಿ ವ್ಯಕ್ತಿಯೊಬ್ಬರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಮೂವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಪಂಜಿಮೊಗರು ಉರುಂದಾಡಿ ಗುಡ್ಡೆ ನಿವಾಸಿ ಚರಣ್ ರಾಜ್(23),ಸುರತ್ಕಲ್ ನಿವಾಸಿ ಸುಮಂತ್ ಬರ್ಮನ್(24),ಕೋಡಿಕಲ್ ನಿವಾಸಿ ಅವಿನಾಶ್(24) ಬಂಧಿತ ಆರೋಪಿಗಳು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ತಲವಾರು,ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾವೂರು ಶಾಂತಿನಗರ ನಿವಾಸಿ ಶುಹೈಬ್(28)ಎಂಬವರು ರವಿವಾರ ರಾತ್ರಿ ಮನೆಗೆ ನಡೆದುಕೊಂಡು ಹೋಗುವಾಗ ಮೂವರು ದುಷ್ಕರ್ಮಿಗಳ ಸ್ಕೂಟರ್ ನಲ್ಲಿ ಮಾರಕಾಸ್ತ್ರದೊಂದಿಗೆ ಬಂದು ದಾಳಿಗೆ ಯತ್ನಿಸಿದ್ದಾರೆ.

ಈ ವೇಳೆ ತಪ್ಪಿಸಿಕೊಂಡು ಹೋದ ಸುಹೈಬ್ ಮೇಲೆ ಕಲ್ಲೆಸೆದಿದ್ದಾರೆ.ಇದರಿಂದ ಗಾಯಗೊಂಡ ಸುಹೈಬ್ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಕುರಿತು ಸುಹೈಬ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಟಾಪ್ ನ್ಯೂಸ್