ಕಾಲ್ನಡಿಗೆಯಲ್ಲಿ ತೆರಳಿ ಮೆಕ್ಕಾಗೆ ತಲುಪಿದ ಶಿಹಾಬ್ ಚೋಟ್ಟೂರ್; ಮಗನ ಜೊತೆ ಹಜ್ಜ್ ಕರ್ಮ ನಿರ್ವಹಿಸಲು ತೆರಳುತ್ತಿರುವ ಶಿಹಾಬ್ ತಾಯಿ, ಶಿಹಾಬ್ ಗುರಿ ತಲುಪಲು ಎಷ್ಟು ಕಿ.ಮೀ ನಡೆದಿದ್ದಾರೆ ಗೊತ್ತಾ?

ಸೌದಿ ಅರೇಬಿಯಾ; ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಬಳಿಯ ಶಿಹಾಬ್ ಚೋಟ್ಟೂರ್ ಕಾಲ್ನಡಿಗೆಯಲ್ಲೆ ಮೆಕ್ಕಾಗೆ ತೆರಳಿ ಕೊನೆಗೂ ಗುರಿ ತಲುಪಿದ್ದಾರೆ.

ಸೌದಿ ಅರೇಬಿಯಾಕ್ಕೆ 8,640 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.ಭಾರತದಿಂದ ಪಾಕಿಸ್ತಾನ, ಇರಾನ್, ಇರಾಕ್, ಕುವೈತ್ ಮತ್ತು ಅಂತಿಮವಾಗಿ ಸೌದಿ ಅರೇಬಿಯಾ ಮೂಲಕ ಮದೀನಾಗೆ ತಲುಪಿದ್ದಾರೆ.ಬಳಿಕ ಮದೀನಾದಿಂದ ಮೆಕ್ಕಾಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.

12 ತಿಂಗಳು ಮತ್ತು 5 ದಿನಗಳಲ್ಲಿ ಜೂನ್ 7 ರಂದು ಶಿಹಾಬ್ ಸೌದಿ ಅರೇಬಿಯಾವನ್ನು ತಲುಪಿದ್ದಾರೆ.ಒಟ್ಟು 370 ದಿನದಲ್ಲಿ ಶಿಹಾಬ್ ಗುರಿ ತಲುಪಿದ್ದಾರೆ.

ಸೂಪರ್ ಮಾರ್ಕೆಟ್ ನಡೆಸುತ್ತಿರುವ ಚೋಟ್ಟೂರ್ ಅವರು ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ, ಮದೀನಾಕ್ಕೆ ಹೋದರು.ಅವರು ಮೆಕ್ಕಾಗೆ ತೆರಳುವ ಮೊದಲು ಮದೀನಾದಲ್ಲಿ 21 ದಿನಗಳನ್ನು ಕಳೆದಿದ್ದರು. ಚೋಟ್ಟೂರು ಪ್ರತಿ ದಿನ ಸರಾಸರಿ 25 ಕಿಲೋಮೀಟರ್ ಕ್ರಮಿಸುತ್ತಾ ಸೌದಿ ಅರೇಬಿಯಾ ತಲುಪಿದ್ದಾರೆ.

ತಾಯಿ ಜೈನಬಾ ಕೇರಳದಿಂದ ಮೆಕ್ಕಾಗೆ ಆಗಮಿಸಿದ ಬಳಿಕ ಶಿಹಾಬ್ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ತಮ್ಮ ಹಜ್ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಶಿಹಾಬ್ ಅವರು ವಾಘಾ ಗಡಿಯನ್ನು ತಲುಪುವ ಮೊದಲು ದೇಶದ ಹಲವಾರು ರಾಜ್ಯಗಳ ಮೂಲಕ ನಡೆದು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು.

ಅವರು ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ತಡೆದ ಕಾರಣ ಅವರಿಗೆ ಪ್ರಯಾಣಕ್ಕೆ ಮೊದಲು ಅಡಚಣೆ ಉಂಟಾಗಿತ್ತು.

ಟ್ರಾನ್ಸಿಟ್ ವೀಸಾ ಪಡೆಯಲು ಅವರು ವಾಘಾದ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಅಂತಿಮವಾಗಿ, ಫೆಬ್ರವರಿ 2023ರಲ್ಲಿ, ಶಿಹಾಬ್ ಟ್ರಾನ್ಸಿಟ್ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಪಾಕಿಸ್ತಾನವನ್ನು ಪ್ರವೇಶಿಸಿದರು ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣ ಆರಂಭಿಸಿದ್ದರು.

ಟಾಪ್ ನ್ಯೂಸ್