ಬೆಳ್ತಂಗಡಿ; 9ನೇ ತರಗತಿಯ ಬಾಲಕ ಆತ್ಮಹತ್ಯೆ, ಶಾಲೆ ರಜೆ ಹಿನ್ನೆಲೆ ದೊಡ್ಡಮ್ಮನ ಮನೆಗೆ ಬಂದಿದ್ದ ಬಾಲಕ!

ಬೆಳ್ತಂಗಡಿ; ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಚಿತ್ರದುರ್ಗದಲ್ಲಿ 9ನೇ ತರಗತಿ‌ ಓದುತ್ತಿದ್ದ ಬಾಲಕ ಶಿವಪ್ರಸಾದ್(15) ಆತ್ಮಹತ್ಯೆ ಮಾಡಿಕೊಂಡ ಬಾಲಕ.‌ಶಿವಪ್ರಸಾದ್ ಶಾಲೆಗೆ ರಜೆ ಹಿನ್ನೆಲೆ ದೊಡ್ಡಮ್ಮ ಮಂಜುಳ ಎಂಬವರ ಬೆಳ್ತಂಗಡಿಯ ಮನೆಗೆ ಬಂದಿದ್ದರು.

ಮಂಜುಳಾ ಅವರು ಬೆಳ್ತಂಗಡಿಯ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.ಅವರು ತಾಲೂಕು ಪಂಚಾಯತ್ ಪಕ್ಕದ ಸರಕಾರಿ ಕ್ವಾಟ್ರಸ್ ನಲ್ಲಿ ವಾಸವಿದ್ದರು.ಮಂಜುಳ ಸಹೋದರಿ ಭಾಗ್ಯಮ್ಮ ಅವರ ಮಗ ಶಾಲೆ ರಜೆ ಹಿನ್ನೆಲೆ ದೊಡ್ಡಮ್ಮನ ಮನೆಗೆ ಬಂದಿದ್ದ.

ಇಂದು‌ ಮಂಜುಳ ಕೆಲಸಕ್ಕೆ ಹೋಗಿದ್ದರು.ಅವರ ಮಗಳು ಮತ್ತು ಮಗ ಕೂಡ ಮನೆಯಲ್ಲಿ ಇರಲಿಲ್ಲ.ಈ ವೇಳೆ ಶಿವಪ್ರಸಾದ್ ಒಬ್ಬನೇ ಮನೆಯಲ್ಲಿ ಇದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕೆಲಸದಿಂದ‌ ಮಧ್ಯಾಹ್ನ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ‌ ನಡೆಸಿದ್ದಾರೆ‌.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com