ಶಿವಮೊಗ್ಗ; ಸ್ನೇಹಿತರ ಜೊತೆ ಪಾರ್ಟಿಗೆ ತೆರಳಿದ್ದ ಯುವಕ ಸಾವು, ಅನುಮಾನ ವ್ಯಕ್ತಪಡಿಸಿದ ಕುಟುಂಬ

ಶಿವಮೊಗ್ಗ:ಪಾರ್ಟಿಗೆಂದು ಹೋಗಿದ್ದ ಯುವಕನೋರ್ವ ಅನುಮಾನಾಸ್ಪದವಾಗಿ‌ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ರೈಲ್ವೆ ಪ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿದೆ.

ಸುರೇಶ್(22) ಮೃತ ಯುವಕ.ಸುರೇಶ್ ರೈಲ್ವೆ ಪ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪದಲ್ಲಿ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದರು.ಈ ವೇಳೆ ವೇಗವಾಗಿ ಫಲ್ಸರ್ ಬೈಕ್ ಬಂದು ಸುರೇಶ್ ಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ.

ಗಂಭೀರವಾಗಿದ್ದ ಸುರೇಶ್ ಗೆ ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಮೃತಪಟ್ಟಿದ್ದಾನೆ.

ಸುರೇಶ್​ ಮೂಲತಃ ಚಿಕ್ಕಮಗಳೂರು ಕಡೂರು ನಿವಾಸಿ.ಈತ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು.

ಇನ್ನು ಮೃತ ಸುರೇಶ್​ ಮೈಮೇಲೆ ಅಪಘಾತದ ಯಾವುದೇ ದೊಡ್ಡ ಗಾಯಗಳಿಲ್ಲ.ಆತನ ಸಾವಿನ ಬಗ್ಗೆ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com