ಶಿವಾಜಿನಗರ ಮಸೀದಿಗೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿಯ ಬಂಧನ

ಬೆಂಗಳೂರು; ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಮಹಾರಾಷ್ಟ್ರದಲ್ಲಿ ಸೈಯದ್ ಮಹಮ್ಮದ್ ಅನ್ವರ್(37) ಎಂಬಾತನನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಶಿವಾಜಿನಗರದಲ್ಲಿರುವ ಆಜಾಂ ಮಸೀದಿಯಲ್ಲಿ ಬಾಂಬ್ ಇರಿಸಿದ್ದಾಗಿ 112ಗೆ ಬಂದ ಕರೆ ಬಂದ ಬಳಿಕ ಶಿವಾಜಿನಗರ ಠಾಣೆಯ ಪೊಲೀಸರು ಮಸೀದಿಗೆ ಬಾಂಬ್ ನಿಷ್ಕ್ರೀಯ ದಳ, ಶ್ವಾನದಳದೊಂದಿಗೆ ತೆರಳಿ ಪರಿಶೀಲನೆ ನಡೆಸಿದಾಗ ಅದೊಂದು ಹುಸಿ ಬಾಂಬ್ ಕರೆ ಎಂಬುದಾಗಿ ತಿಳಿದು ಬಂದಿದತ್ತು.

ಬಂಧಿತ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತನಗೆ ಆಜಾಂ ಮಸೀದಿಯಲ್ಲಿ ರಾತ್ರಿ ಮಲಗಲು ಅವಕಾಶ ನೀಡಲಿಲ್ಲ. ಹೀಗಾಗಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿ ಸೈಯದ್ ಮಸೀದಿಗಳ ಬಳಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ಶಿವಾಜಿನಗರ ಆಜಾಂ ಮಸೀದಿಯಲ್ಲಿ ರಾತ್ರಿ ಮಲಗಲು ಅಲ್ಲಿನ ಸಿಬ್ಬಂದಿಗೆ ಕೇಳಿದ್ದನು. ಆದರೆ ಅದಕ್ಕೆ ಸಿಬ್ಬಂದಿಗಳು ಅವಕಾಶ ಇಲ್ಲ ಎಂಬುದಾಗಿ ತಿಳಿಸಿದ್ದರು.

ಇದೇ ಸಿಟ್ಟಿನಿಂದ ಮೆಜೆಸ್ಟಿಕ್ ಗೆ ಬಂದಿದ್ದಂತ ಆರೋಪಿ ಕರ್ನೂಲ್ ಬಸ್ ಹತ್ತಿದ್ದನು. ದೇವನಹಳ್ಳಿ ಬಿಡುತ್ತಿದ್ದಂತೆ 112ಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ.

ಟಾಪ್ ನ್ಯೂಸ್