ಕೇರಳ;ವ್ಯಕ್ತಿಯೋರ್ವರ ಶರ್ಟ್ ಜೇಬಿನಲ್ಲೇ ಮೊಬೈಲ್ ಸ್ಪೋಟಗೊಂಡ ಘಟನೆ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.
70 ವರ್ಷದ ವ್ಯಕ್ತಿಯೊಬ್ಬರು ಮೊಬೈಲನ್ನು ಶರ್ಟ್ ಜೇಬಿನಲ್ಲಿ
ಇಟ್ಟುಕೊಂಡಿದ್ದರು.ಮೊಬೈಲ್ ಫೋನ್ ದಿಡೀರ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ.ಈ ಕುರಿತು ವಿಡಿಯೋ ಕೂಡ ವೈರಲ್ ಆಗಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ಇಲಿಯಾಸ್ ಎಂಬ ವ್ಯಕ್ತಿ ಮರೋಟ್ಟಿಚಾಲ್ ಪ್ರದೇಶದ ಚಹಾ ಅಂಗಡಿಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ವೇಳೆ ಈ ಘಟನೆ ನಡೆದಿದೆ.
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿ ಅಂಗಡಿಯಲ್ಲಿನ ಟೇಬಲ್‌ನಲ್ಲಿ ಕುಳಿತು ಚಹಾ ಸೇವಿಸುವುದನ್ನು ನೋಡಬಹುದು.ಈ ವೇಳೆ ಅವನ ಶರ್ಟ್ ಜೇಬಿನಲ್ಲಿರುವ ಫೋನ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ವ್ಯಕ್ತಿ ತನ್ನ ಜೇಬಿನಿಂದ ಮೊಬೈಲ್ ಫೋನ್ ನ್ನು ಹೊರತೆಗೆಯಲು ಪ್ರಯತ್ನಿಸುತ್ತಾನೆ.ಬಳಿಕ ಅಲ್ಲಿದ್ದವರು ಓಡಿ ಬಂದು ಶರ್ಟ್ ನ ಬೆಂಕಿ ನಂದಿಸಿದ್ದಾರೆ.
ವ್ಯಕ್ತಿ ಈ ಮೊಬೈಲ್ ಅನ್ನು ವರ್ಷದ ಹಿಂದೆ 1000 ರೂ.ಗೆ ಖರೀದಿಸಿದ್ದರು ಎನ್ನಲಾಗಿದೆ.ಇದೀಗ ಮೊಬೈಲ್ ಸ್ಪೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಒಂದೆ ವಾರದಲ್ಲಿ ಇದು ಕೇರಳದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಕೋಝಿಕ್ಕೋಡ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ವ್ಯಕ್ತಿಯೊಬ್ಬನಿಗೆ ಸುಟ್ಟಗಾಯಗಳಾಗಿದ್ದವು.