ಶಿವಮೊಗ್ಗ; ಚೂರಿ ಇರಿತದ ಆರೋಪಿಗಳ ಮೇಲೆ ಯುಎಪಿಎಯಡಿ ಕೇಸ್!

ಶಿವಮೊಗ್ಗ;ಚೂರಿ ಇರಿತದ ಆರೋಪಿಗಳ ಮೇಲೆ ಯುಎಪಿಎಯಡಿ ಕೇಸ್!
ಶಿವಮೊಗ್ಗ;ಪ್ರೇಮ್‌ಸಿಂಗ್‌ ಎಂಬ ಯುವಕನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳ ಮೇಲೆ ಯುಎಪಿಎಯಡಿ ಪ್ರಕರಣ ದಾಖಲಿಸಲಾಗಿದೆ.

ಚೂರಿ ಇರಿತಕ್ಕೆ ಸಂಬಂಧಿಸಿ ತನ್ವೀರ್‌(22),ನದೀಮ್‌ (25) ಹಾಗೂ ರೆಹಮಾನ್‌(25)ಹಾಗೂ ಮೊಹಮ್ಮದ್‌ ಜಬೀಉಲ್ಲಾ(30)ಅವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು.ಬಂಧಿತರ ಮೇಲೆ ಇದೀಗ ಯುಎಪಿಎಯಡಿ ಕೇಸ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಸಾವರ್ಕರ್‌ ಫ್ಲೆಕ್ಸ್ ವಿಚಾರವಾಗಿ ಸ್ವಾತಂತ್ರ್ಯದ ದಿನ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು.‌ಇದರ ಬೆನ್ನಲ್ಲೇ ಚೂರಿ‌ ಇರಿತ ಕೂಡ ನಡೆದಿತ್ತು.

ಇದೀಗ ಆರೋಪಿಗಳ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ)ಕಾಯಿದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.


ಟಾಪ್ ನ್ಯೂಸ್