ಶಿವಮೊಗ್ಗ; ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಇಬ್ಬರು ಯುವಕರು ಮೃತ್ಯು

ಶಿವಮೊಗ್ಗ; ಹೋರಿ ಬೆದರಿಸುವ ಸ್ಪರ್ಧೆ ವೇಳೆ ಗೂಳಿ ತಿವಿದು ಇಬ್ಬರು ಯುವಕರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ
ಶಿಕಾರಿಪುರ ತಾಲೂಕು ಮಳೂರು ಗ್ರಾಮದಲ್ಲಿ ನಡೆದಿದೆ‌.

ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ರಂಗನಾಥ್ (24) ಆಲ್ಕೊಳದ ಲೋಕೇಶ್(34) ಎಂಬವರು ಮೃತಪಟ್ಟವರಾಗಿದ್ದಾರೆ.

ಮಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಏಕಾಏಕಿ ಪ್ರೇಕ್ಷಕರ ಕಡೆ ನುಗ್ಗಿದ ಗೂಳಿ ರಂಗನಾಥ್ ಗೆ ತಿವಿದು ಗಂಭೀರವಾಗಿ ಗಾಯಗೊಳಿಸಿತ್ತು. ಕೂಡಲೇ ಅವರನ್ನು ಶಿಕಾರಿಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇನ್ನು ಕೊನಗವಳ್ಳಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಶಿವಮೊಗ್ಗದ ಆಲ್ಕೊಳದ ಲೋಕೇಶ್ ಹೋರಿಯ ತಿವಿತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್