ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಶಿಮ್ಲಾ ಜಿಲ್ಲೆಯ ರಾಮ್‌ಪುರದ ಹಿಂದೂ ದೇವಾಲಯದ ಆವರಣದಲ್ಲಿ ಇಸ್ಲಾಮಿಕ್ ವಿವಾಹ ಪದ್ಧತಿಯಂತೆ ಮುಸ್ಲಿಂ ಜೋಡಿಯ ವಿವಾಹ ನಡೆಯಿತು.
ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ವಿವಾಹ ನೆರವೇರಿತು.ಮುಸ್ಲಿಂ ಮತ್ತು ಹಿಂದೂ ಸಮಾಜದ ಜನರು ಒಂದೆಡೆ ಸೇರಿ ಸಮಾರಂಭಕ್ಕೆ ಸಾಕ್ಷಿಯಾದರು.
ದೇವಸ್ಥಾನದ ಆವರಣದಲ್ಲಿ ಮೌಲ್ವಿ, ಮತ್ತು ವಕೀಲರ ಸಮ್ಮುಖದಲ್ಲಿ ನಿಕಾಹ್ ನೆರವೇರಿಸಲಾಯಿತು.
ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮದುವೆಯನ್ನು ದೇವಸ್ಥಾನದ ಆವರಣದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ.