ಹುಬ್ಬಳ್ಳಿ;ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಸೋಲನ್ನು ಕಂಡಿದ್ದಾರೆ.
ಈ ಕುರಿತು ಮಾತಾಡಿರುವ ಶೆಟ್ಟರ್, ಜನರ ತೀರ್ಮಾನವನ್ನ ಗೌರವಿಸುತ್ತೇನೆ. ನನ್ನನ್ನ ಸೋಲಿಸಬೇಕೆಂದು ಹಲವರು ಹಠ ತೊಟ್ಟಿದ್ದರು.ಅವರ ಆಸೆ ಈಡೇರಿದೆ. ಸೋತಿದ್ದಕ್ಕೆ ದುಃಖ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವ್ರು, ನನಗೆ ಪೆಟ್ಟು ಕೊಡಲು ಹೋಗಿ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಟಿಕೆಟ್ ನೀಡದ ಕಾರಣಕ್ಕೆ ಕಾಂಗ್ರೆಸ್ ಸೇರಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಲು ಅನುಭವಿಸಿದ್ದಾರೆ. ಸತತ 6 ಭಾರಿ ಗೆದ್ದಿದ್ದ ಜಗದೀಶ ಶೆಟ್ಟರ್ ಅವರು ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ 35 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ರಾಜಕೀಯ ನಿವೃತಿಗೆ ಚಿಂತನೆ- ಸೋತ ಬಳಿಕ ವಿನಯ್ ಕುಮಾರ್ ಸೊರಕೆ ಹೇಳಿಕೆ
ಕಾಪು;ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ ಎಂದು ಸೋಲು ಕಂಡ ಬಳಿಕ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಮತ ಎಣಿಕಾ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸೋಲು ಅಭಿವೃದ್ಧಿಗೆ ಆಗಿರುವ ಸೋಲು.ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಹಿಡಿತ ಸಾಧಿಸಿದೆ ಎಂದು ಹೇಳಿದ್ದಾರೆ.
ಈ ಬಾರಿ ಅಂಚೆ ಮತದಾನದಲ್ಲಿ ನನಗೆ ಬಹಳ ಹಿನ್ನಡೆ ಯಾಗಿತ್ತು. ರಾಜ್ಯದಲ್ಲೇ ನಮ್ಮದೆ ಸರಕಾರ ಇರುವುದರಿಂದ ಗ್ಯಾರಂಟಿ ಕಾರ್ಡ್ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದ್ದಾರೆ.