ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ‌ ಯಾತ್ರೆ ಬಂದಿದ್ದ ವ್ಯಕ್ತಿ ಮೆಕ್ಕಾ ತಲುಪಿ ನಿಧನ

ದುಬೈ:ಜರ್ಮನಿಯಿಂದ ಮೆಕ್ಕಾಗೆ ಸೈಕಲ್ ನಲ್ಲಿ ತೆರಳಿದ್ದ ಸಿರಿಯಾ ಯಾತ್ರಿಕನೋರ್ವ ಮೆಕ್ಕಾವನ್ನು ತಲುಪಿ ಮೃತಪಟ್ಟಿದ್ದಾನೆ ಎಂದು ಗಲ್ಫ್ ಮಾಧ್ಯಮಗಳು ವರದಿ ಮಾಡಿವೆ.

ಜರ್ಮನಿಯಲ್ಲಿ ನೆಲೆಸಿದ್ದ ಹೋಮ್ಸ್‌ನ 53 ವರ್ಷದ ಸಿರಿಯನ್ ವ್ಯಕ್ತಿ ಗಾಝಿ ಜಸ್ಸಿಮ್ ಶೆಹದೆಹ್ ಸೈಕಲ್ ನಲ್ಲಿ ಪ್ರಯಾಣಿಸಿ 73 ದಿನಗಳ ನಂತರ ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ತಲುಪಿದ್ದರು‌.

ಶೆಹಾದೆಹ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದರು. ಅವರ ಅನುಭವಗಳು ಮತ್ತು ಸವಾಲುಗಳನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು.

ವರದಿಗಳ ಪ್ರಕಾರ, ಶೆಹಾದೆಹ್ ನಂಬಿಕೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಲು ಮೆಕ್ಕಾಗೆ ತನ್ನ ಯಾತ್ರೆಯನ್ನು ಪೂರ್ಣಗೊಳಿಸಲು ಬಯಸಿದ್ದರು.ಅದರಂತೆ ಮೆಕ್ಕಾ ತಲುಪಿ ಮೃತಪಟ್ಟಿದ್ದಾರೆ.

ಮೆಕ್ಕಾದ ಪವಿತ್ರ ಮಸೀದಿಗೆ ಆಗಮಿಸಿದ ನಂತರ, ಶೆಹಾದೆಹ್ ನಿಧನರಾದರು.ನಂತರ ಮೆಕ್ಕಾದಲ್ಲಿ ಸಮಾಧಿ ಮಾಡಲಾಯಿತು.

ಶೆಹಾದೆಹ್ ಅವರ ಪ್ರಯಾಣವು ವ್ಯಾಪಕ ಗಮನ ಮತ್ತು ಮೆಚ್ಚುಗೆಯನ್ನು ಗಳಿಸಿತ್ತು. ಅವರ ನಿಧನದ ಬಗ್ಗೆ ಅನೇಕರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com