24 ವರ್ಷದ ಯುವಕ ತನ್ನ ಕೆಲಸದ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿ 56 ಬ್ಲೇಡ್ ಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಶಸ್ತ್ರಚಿಕಿತ್ಸೆ ನಂತರ, ಅವನ ಹೊಟ್ಟೆಯಿಂದ ಬ್ಲೇಡ್ಗಳನ್ನು ಹೊರ ತೆಗೆಯಲಾಗಿದೆ.
ಜಲೋರ್:ರಾಜಸ್ಥಾನದ ಜಲೋರ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 24ರ ಹರೆಯದ ಯುವಕನ ಹೊಟ್ಟೆಯಿಂದ ಕೇವಲ ಎರಡಲ್ಲ 56 ಶೇವಿಂಗ್ ಬ್ಲೇಡ್‌ಗಳನ್ನು ತೆಗೆಯಲಾಗಿದೆ.
ಈ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಈ ಭಯಾನಕ ಕೃತ್ಯ ಎಸಗಿದ್ದಾನೆ.ಈ ಯುವಕ ಸಂಚೌರ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಲ್ಲಿದ್ದ ಬ್ಲೇಡ್ ತುಂಡುಗಳನ್ನು ಹೊರತೆಗೆದಿದ್ದಾರೆ. ಅವರ ಆರೋಗ್ಯ ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬ್ಲೇಡ್ ನುಂಗಿದ 24 ವರ್ಷದ ಈ ಯುವಕನ ಹೆಸರು ಯಶಪಾಲ್ ರಾವ್.ಈತ ಬಾಲಾಜಿ ನಗರದಲ್ಲಿ ನಾಲ್ವರು ಸ್ನೇಹಿತರೊಂದಿಗೆ ವಾಸವಾಗಿದ್ದ. ಬ್ಲೇಡ್ ತುಂಡುಗಳನ್ನು ನುಂಗಿದ ಬಳಿಕ ರಕ್ತ ವಾಂತಿ ಮಾಡಿಕೊಳ್ಳಲು ಆರಂಭಿಸಿದ. ಹಾಗಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ಆತನ ಹೊಟ್ಟೆಯ ಎಕ್ಸ್ ರೇ ತೆಗೆಯಲಾಗಿದೆ. ಆಗ ಹೊಟ್ಟೆಯಲ್ಲಿ ಶೇವಿಂಗ್ ಬ್ಲೇಡ್ ತುಂಡುಗಳ ರಾಶಿ ಕಂಡಿದೆ. ನಂತರ ವೈದ್ಯರು ಎಂಡೋಸ್ಕೋಪಿ ನಡೆಸಿ ನಂತರ ಶಸ್ತ್ರಚಿಕಿತ್ಸೆ ನಡೆಸಿ 56 ಶೇವಿಂಗ್ ಬ್ಲೇಡ್‌ನ ಒಂದರ ನಂತರ ಒಂದರಂತೆ ಆತನ ಹೊಟ್ಟೆಯಿಂದ ಹೊರತೆಗೆದರು.