Shocking ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ದಂಪತಿ ಆತ್ಮಹತ್ಯೆ; ಒಂದೇ ಮನೆಯಲ್ಲಿ ನಾಲ್ವರು ಮೃತ್ಯು

Shocking ಇಬ್ಬರು ಮಕ್ಕಳಿಗೆ ವಿಷ ಉಣಿಸಿ , ದಂಪತಿ ಆತ್ಮಹತ್ಯೆ; ಒಂದೇ ಮನೆಯಲ್ಲಿ ನಾಲ್ವರು ಮೃತ್ಯು

ಹೈದರಾಬಾದ್:ಇಬ್ಬರು ಮಕ್ಕಳು ಸೇರಿದಂತೆ ಸಾಫ್ಟ್‌ವೇರ್ ಇಂಜಿನಿಯರ್ ಕುಟುಂಬದ ನಾಲ್ವರು ಶನಿವಾರ ಕುಶೈಗುಡಾದ ಅವರ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಕ್ಕಳ ಅಸೌಖ್ಯದಿಂದ ದಂಪತಿಗಳು ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತರು ತಮ್ಮ ಜೀವನವನ್ನು ಅಂತ್ಯಗೊಳಿಸಲು ವಿಷ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

ಸತೀಶ್(39) ಅವರ ಪತ್ನಿ ಜಿ ವೇದಾ(35) ಮತ್ತು ಅವರ ಮಕ್ಕಳಾದ ನಿಶಿಕೇತ್(9)ಮತ್ತು ಜಿ ನಿಹಾಲ್ (5) ಕಂದಿಗುಡದಲ್ಲಿರುವ ಪಾರ್ಕ್ ರಾಯಲ್ ಅಪಾರ್ಟ್‌ಮೆಂಟ್ ಫ್ಲಾಟ್‌ನಲ್ಲಿ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕುಶೈಗುಡ ಪೊಲೀಸರು ತಿಳಿಸಿದ್ದಾರೆ.

ನಮ್ಮ ತನಿಖೆಯ ಪ್ರಕಾರ, ದಂಪತಿಗಳು ತಮ್ಮ ಮಕ್ಕಳ ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ನೊಂದು ಈ ತೀವ್ರ ಹೆಜ್ಜೆಯನ್ನಿಟ್ಟಿದ್ದಾರೆ. ತಮ್ಮ ಸಾವಿಗೆ ಯಾರೂ ಜವಾಬ್ದಾರರಲ್ಲ ಎಂಬುದಾಗಿ ಅವರು ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ ಎಂದು ಕುಶೈಗುಡ ಇನ್ಸ್‌ಪೆಕ್ಟರ್ ಪಿ ವೆಂಕಟೇಶ್ವರಲು ಹೇಳಿದ್ದಾರೆ.

ಟಾಪ್ ನ್ಯೂಸ್