ತ್ರಿಶೂರ್;ತ್ರಿಶೂರ್ ಮೂಲದ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ಸೆಂಟರ್ ನಲ್ಲಿ ಇಸ್ಲಾಮಿಕ್ ಷರಿಯಾ ಕೋರ್ಸ್ ಜೊತೆಗೆ ಭಗವದ್ಗೀತೆ, ಅದ್ವೈತ ತತ್ತ್ವಶಾಸ್ತ್ರದ ಅರಿವನ್ನು ಮೂಡಿಸಲಾಗುತ್ತಿದೆ.
ASAS,ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲಮಾದ ಅಧೀನದಲ್ಲಿದೆ.
ಸಂಸ್ಕೃತ ವಿದ್ವಾಂಸರಾದ ಸಮಸ್ತ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಓಂಪಲ್ಲಿ ಮುಹಮ್ಮದ್ ಫೈಝಿ ಅವರು ASAS ನಲ್ಲಿ ಈ ರೀತಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಸಂಸ್ಕೃತ ವಿದ್ವಾಂಸರಾದ ಕೆ ಪಿ ನಾರಾಯಣ ಪಿಶಾರಡಿಯವರ ಶಿಷ್ಯರಾದ ಯತೀಂದ್ರನ್ ಅವರು ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸುತ್ತಾರೆ.