ತುಮಕೂರು:ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನ ಮುಸ್ಲಿಮ್ ಯುವಕರ ಎದುರೇ ಫಾಝಿಲ್ ನನ್ನು ಕೊಲೆ ಮಾಡಲಾಗಿದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಶರಣ್ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ. ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಶರಣ್ ಪಂಪ್ವೆಲ್, ಮಂಗಳೂರಿನಲ್ಲಿ ನಡೆದ ಕೊಲೆಯನ್ನು ಸಮರ್ಥಿಸಿದ್ದಾರೆ.ಇದು ಹಿಂದೂ ಯುವಕರ ಸಾಮರ್ಥ್ಯ ಎಂದು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ವ್ಯಕ್ತಿಯೋರ್ವನ ಕೊಲೆಯನ್ನು ಉದಾಹರಣೆಯಾಗಿಟ್ಟುಕೊಂಡು ಸಮರ್ಥನೀಯವಾಗಿ ಭಾಷಣ ಮಾಡಿದವನ ವಿರುದ್ಧ ಕ್ರಮಕ್ಕೆ ಇದೀಗ ಜನರು ಆಗ್ರಹಿಸಿದ್ದಾರೆ.