ತಾಯಿ & ಮಗ ನೈಟ್ರೋಜನ್ ಗ್ಯಾಸ್ ಸೇವಿಸಿ ಆತ್ಮಹತ್ಯೆ!; ಆತ್ಮಹತ್ಯೆಗೆ ಮುನ್ನಾ ಕೊಠಡಿಯಲ್ಲಿ ಬೇಕಿದ್ದ ಸಿದ್ದತೆ ಮಾಡಿಕೊಂಡಿದ್ದ ಮಗ
ತಮಿಳುನಾಡು;ತಾಯಿ ಮತ್ತು ಮಗ ನೈಟ್ರೋಜನ್ ಗ್ಯಾಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಿದೆ.
ಪಳನಿವೇಲ್ ಎಂಬ ನಿವೃತ್ತ ಶಿಕ್ಷಕನ ಪತ್ನಿ ಶಾಂತಿ ಹಾಗೂ ಪುತ್ರ ವಿಜಯ್ ಆನಂದ್ ಆತ್ಮಹತ್ಯೆ ಮಾಡಿಕೊಂಡವರು.
ಇವರು ಧರ್ಮಪುರಿ ಜಿಲ್ಲೆಯ ಪುಲಿಕರೈನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಇಂಜಿನಿಯರಿಂಗ್ ವಿಜಯ್ ಆನಂದ್ ತನ್ನ ಸ್ನೇಹಿತರಾದ ಕಾರ್ತಿಕ್ ಮತ್ತು ಅರುಣ್ ಜೊತೆಗೂಡಿ ಕುಮಾರಪಾಳ್ಯಂ ಪ್ರದೇಶದಲ್ಲಿ ನೂಲಿನ ಗಿರಣಿ ಆರಂಭಿಸಿದ್ದರು. ಕೆಲವು ತಿಂಗಳುಗಳ ನಂತರ,ವ್ಯಾಪಾರದಲ್ಲಿ ನಷ್ಟವುಂಟಾಗಿತ್ತು.
ಇದರಿಂದ ಅಪಾರ ಸಾಲ ಮಾಡಿದ್ದರು.ಪ್ರತಿ ತಿಂಗಳು 25 ಲಕ್ಷ ಬಡ್ಡಿ ಕಟ್ಟುತ್ತಿದ್ದರು. ಆದರೆ ಕಳೆದ ಕೆಲ ತಿಂಗಳಿಂದ ಸರಿಯಾಗಿ ಬಡ್ಡಿ ಪಾವತಿಯಾಗುತ್ತಿರಲಿಲ್ಲ.ಇದರಿಂದ ಸಾಲಗಾರರ ಕಾಟ ಪ್ರಾರಂಭವಾಗಿತ್ತು.ಇದರಿಂದ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ವಿಜಯ್ ಆನಂದ್ ಅವರು ನೋವು ಅನುಭವಿಸದೇ ಸಾಯಬೇಕೆಂದು ನೈಟ್ರೋಜನ್ ಸಿಲಿಂಡರ್ ಸೇರಿದಂತೆ ಕೆಲವು ಉಪಕರಣಗಳನ್ನು ಖರೀದಿಸಿದ್ದಾರೆ. ನಂತರ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಸಾರಜನಕವನ್ನು ಉಸಿರಾಡಿದ್ದಾರೆ. ಇಬ್ಬರೂ ಮೂರ್ಛೆ ಹೋಗಿದ್ದು, ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿದ್ದಾರೆಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ.
ಮನೆಯ ಕೋಣೆಯಲ್ಲಿ ಎರಡು ಸಿಲಿಂಡರ್‌ಗಳು, ಸಾರಜನಕವನ್ನು ಖರೀದಿಸುವ ಬಾಕ್ಸ್‌ಗಳು ಮತ್ತು ಸಿಲಿಂಡರ್ ಜೋಡಿಸಲು ಬೇಕಾದ ಉಪಕರಣಗಳು ಪತ್ತೆಯಾಗಿವೆ. ಅಲ್ಲದೇ ಬಾಗಿಲಿಗೆ ಚಾರ್ಟ್ ಹಾಗೂ ಪತ್ರವನ್ನು ಅಂಟಿಸಲಾಗಿತ್ತು ಎನ್ನಲಾಗಿದೆ.ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.