ಬ್ರೈನ್ ಟ್ಯೂಮರ್ ನಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಸಮಾಜ ಸೇವಕಿ ಸಹನಾ ಅವರ ಅಂಗಾಂಗ ದಾನ; ಝಿರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ

ಚಿಕ್ಕಮಗಳೂರು;ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಮೆದುಳು ನಿಷ್ಕ್ರೀಯಗೊಂಡು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡಲಾಗಿದ್ದು,ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಚಿಕ್ಕಮಗಳೂರು ಸಮಾಜ ಸೇವಕ ಹಾಗೂ ನಗರಸಭೆ ಮಾಜಿ ಸದಸ್ಯ ರೂಬೆನ್ ಮೋಸೆಸ್ ಅವರ ಪತ್ನಿ ಸಹನಾ ಜೋನ್ಸ್ ಅವರು ಕಳೆದ ಶುಕ್ರವಾರ ತಮ್ಮ ಮನೆಯಲ್ಲಿದ್ದ ವೇಳೆ ತೀವ್ರ ತಲೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.ಕೂಡಲೇ ಅವರನ್ನು ನಗರದ ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.ಸಹನಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಬ್ರೈನ್ ಟ್ಯೂಮರ್ ಇರುವುದನ್ನು ಪತ್ತೆ ಮಾಡಿದ್ದರು.

ಬಳಿಕ ಗಂಭೀರವಾಗಿದ್ದ ಸಹನಾ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.

ಸಹನಾ ಅವರ ಮೆದುಳು ಹೊರತು ಪಡಿಸಿ ಉಳಿದ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಸಹನಾ ಪತಿ ರೂಬೆನ್ ಅವರು ಪತ್ನಿಯ ಬಯಕೆಯಂತೆ ಅಂಗಾಂಗಳ ದಾನಕ್ಕೆ ನಿರ್ಧರಿಸಿದ್ದರು.

ಮೆದುಳು ನಿಷ್ಕ್ರೀಯಗೊಂಡಿದ್ದ ಸಹನಾ ಅವರ ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ವೈದ್ಯರು ಕಣ್ಣು, ಕಿಡ್ನಿ ಲಿವರ್ ಸೇರಿ ಅಂಗಾಂಗಳನ್ನು ಬೇರ್ಪಡಿಸಿ ವಿವಿಧ ಆಸ್ಪತ್ರೆಗೆ ರವಾನಿಸಿದ್ದಾರೆ.

ಟಾಪ್ ನ್ಯೂಸ್