ಬೆಂಗಳೂರು;ಭಾನುವಾರದಿಂದ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಮಹಿಳೆಯರು ಸರಕಾರಿ ಬಸ್ ನಲ್ಲಿ ಹುಮ್ಮಸ್ಸಿನಿಂದ ಸಂಚಾರ ಮಾಡುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಎರಡನೇ ದಿನ 41,34,726 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಇದರ ಪ್ರಯಾಣದ ಮೌಲ್ಯ ರೂಪಾಯಿ 8,83,53,434 ಕೋಟಿ ಎನ್ನಲಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು 3ನೇ ದಿನ 51 ಲಕ್ಷ ಮಹಿಳೆಯರು ಕರ್ನಾಟಕ ಸರ್ಕಾರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ಮೂಲಕ 10 ಕೋಟಿ 82 ಲಕ್ಷ ವೆಚ್ಚ 3ನೇ ದಿನಕ್ಕೆ ತಗುಲಿದೆ.
ಮೂರು ದಿನಗಳಲ್ಲಿ 98,58,518 ಮಹಿಳೆಯರು ರಾಜ್ಯದ ಸರಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದರ ಒಟ್ಟು ಪ್ರಯಾಣದ ವೆಚ್ಚ 21.06 ಕೋಟಿ ರೂ.ಆಗಿದೆ.
ದಿನದಿಂದ ದಿನಕ್ಕೆ ಸರ್ಕಾರಿ ಸಾರಿಗೆ ಬಳಸುವ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಮೂಲಕ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಪೈಕಿ, ಉಚಿತ ಬಸ್ ಯೋಜನೆ ಸಕ್ಸಸ್ ಆಗುತ್ತಿದೆ ಎಂದು ಸಂತಸ ಪಟ್ಟಿದೆ.
ಶಕ್ತಿ ಯೋಜನೆ ಜಾರಿಯಾಗಿ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ.ಮಹಿಳೆಯರ ಸ್ವಾವಲಂಬನೆಗೆ, ಸ್ವಾಭಿಮಾನದ ಬದುಕಿಗೆ ಈ ಯೋಜನೆ ಕ್ರಾಂತಿಕಾರಕ ಬೆಂಬಲ ನೀಡಲಿದೆ.ಕಾಂಗ್ರೆಸ್ ನ ಚಿಂತನೆ, ಯೋಜನೆಗಳು ಸದಾ ಜನಪರವಾಗಿರುತ್ತವೆ ಎಂದು ಕಾಂಗ್ರೆಸ್ ಟ್ಚೀಟ್ ಮಾಡಿದೆ