ಬೈಕ್ & ಜೀಪು ನಡುವೆ ಭೀಕರ ಅಪಘಾತ;SFI ಕಾರ್ಯಕರ್ತ ದುರ್ಮರಣ

ಕಾಸರಗೋಡು:ಬೈಕ್ ಮತ್ತು ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಜಾಲ್ಸೂರು ಚೆರ್ಕಳ ರಸ್ತೆಯ ಬೋವಿಕ್ಕಾನದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮಲ್ಲ ಕಲ್ಲುಕಂಡದ ಅಖಿಲ್ (22) ಮೃತಪಟ್ಟ ಯುವಕ.ಅಖಿಲ್ ಎಸ್ಎಫ್ಐ ಕಾರ್ಯಕರ್ತನಾಗಿದ್ದನು.

ಅಖಿಲ್ ಬೋವಿಕ್ಕಾನದಿಂದ ಕಲ್ಲು ಕಂಡದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಅಖಿಲ್‌‌ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ.

ಈ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್