-ಸಾದಿಕ್ ಶೇಖ್, 55, ಜುನೈದ್ ಶೇಖ್, 32, ನವೀದ್ ಶೇಖ್, 28, ಶಾರುಖ್ ಶೇಖ್, 28, ಮತ್ತು ಫಿರೋಜ್ ಶೇಖ್ 27 ಮೃತರು.
ಮಹಾರಾಷ್ಟ್ರ;ಪರ್ಭಾನಿ ಜಿಲ್ಲೆಯ ಸೋನ್‌ಪೇತ್ ತಾಲೂಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಐವರನ್ನು ಸಾದಿಕ್ ಶೇಖ್, 55, ಜುನೈದ್ ಶೇಖ್, 32, ನವೀದ್ ಶೇಖ್, 28, ಶಾರುಖ್ ಶೇಖ್, 28, ಮತ್ತು ಫಿರೋಜ್ ಶೇಖ್, 27 ಎಂದು ಗುರುತಿಸಲಾಗಿದ್ದು,ಇವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಆಕಸ್ಮಿಕ ಮರಣ ವರದಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಐವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಯೇ ಅಥವಾ ಟ್ಯಾಂಕ್ ಸ್ವಚ್ಛಗೊಳಿಸಲು ಬಳಸುತ್ತಿದ್ದ ಯಂತ್ರದಿಂದ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆಯೇ ಎಂದು ಖಚಿತಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಸೋನ್‌ಪೇಠ ತಾಲೂಕಿನ ಭೌಚಾ ತಾಂಡಾ ಶಿವರಾದಲ್ಲಿ ರಾತ್ರಿ 8.30 ಕ್ಕೆ ಇವರು ಟ್ಯಾಂಕ್‌ನ ಸ್ವಚ್ಛತೆಯನ್ನು ಆರಂಭಿಸಿದ್ದು ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸೋನ್‌ಪೇಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ರೆಜಿತ್ವಾಡ್ ತಿಳಿಸಿದ್ದಾರೆ.
ಸಬೀರ್ ಶೇಖ್ ಎಂಬ ಕಾರ್ಮಿಕ ಟ್ಯಾಂಕ್ ಒಳಗೆ ಬಿದ್ದಿದ್ದ. ಆದರೆ ಸಹೋದ್ಯೋಗಿ ಅವರನ್ನು ರಕ್ಷಿಸಿದ್ದಾರೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಎರಡನೇ ಕೆಲಸಗಾರ ಕೂಡ ಕುಸಿದು ಬಿದ್ದನು. ನಂತರ, ಇತರ ನಾಲ್ವರು ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಲು ಒಳಗೆ ಹೋದಾಗ, ಅವರೆಲ್ಲರೂ ಟ್ಯಾಂಕ್‌ನೊಳಗೆ ಕುಸಿದು ಬಿದ್ದರು ಎಂದು ರೆಜಿತ್ವಾಡ್ ಹೇಳಿದರು.
ಇನ್ನು ಪರ್ಲಿಯ ಆಸ್ಪತ್ರೆಗೆ ದಾಖಲಾಗಿರುವ ಸಬೀರ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.ಮೃತರು ಎಲ್ಲರೂ ಸಂಬಂಧಿಕರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸುಲ್ತಾನ್ ಎಂಬುವರು ನಗರದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಗುತ್ತಿಗೆ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುಲ್ತಾನ್ ಇತರ ಆರು ಮಂದಿಯೊಂದಿಗೆ ಮಧ್ಯಾಹ್ನ 3.30 ಕ್ಕೆ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು ಎಂದು ಅಧಿಕಾರಿ ಹೇಳಿದರು.
ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಸಾವಿನ ಕಾರಣವನ್ನು ಕಂಡುಹಿಡಿಯಲು ನಮಗೆ ಸಹಾಯ ಮಾಡುತ್ತದೆ ಎಂದು ರೆಜಿತ್ವಾಡ್ ಹೇಳಿದರು.