ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು ರಕ್ಷಿಸಿದ್ದಾರೆ.

ಶಿಕ್ಷಣಕ್ಕೆಂದು ಬಂದ ಆತನಿಗೆ ಮೂರು ಮನೆಗಳಲ್ಲಿ ಕೆಲಸ ಮಾಡಲು ಒತ್ತಾಯಿಸಿದ್ದು, ಇದಕ್ಕೆ ಆತ ಒಪ್ಪದಿದ್ದಾಗ ಈ ದುಷ್ಕೃತ್ಯವೆಸಗಿದ್ದಾರೆ.

ಸೇಂಟ್ ಚಾರ್ಲ್ಸ್ ಕೌಂಟಿಯ ಗ್ರಾಮೀಣ ಹೆದ್ದಾರಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಆಗ ವಿದ್ಯಾರ್ಥಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾರ್ಥಿಗೆ ಆರೇಳು ತಿಂಗಳಿಂದ ಕೂಡಿಹಾಕಿ, ಥಳಿಸಿರುವುದು ಕಂಡುಬಂದಿದೆ. ಮಾನವ ಕಳ್ಳಸಾಗಣೆ, ಅಪಹರಣ ಮತ್ತು ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಡಿ ಪ್ರಕರಣ ದಾಖಲಿಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಆರ್, ಸಟ್ಟರು, ಶ್ರವಣ್ ವರ್ಮ ಪೆನುಮೆಚ್ಚ ಮತ್ತು ನಿಖಿಲ್ ವರ್ಮಾ ಪೆನ್ಮತ್ಸನನ್ನು ಬಂಧಿಸಲಾಗಿದೆ.

ವಿದ್ಯಾರ್ಥಿ ಹೆಸರು ಬಹಿರಂಗಪಡಿಸಿಲ್ಲವಾಗಿದೆ. ರೋಲಾದಲ್ಲಿರುವ ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಭರವಸೆಯೊಂದಿಗೆ ವಿದ್ಯಾರ್ಥಿಯು ಕಳೆದ ವರ್ಷ ಭಾರತದಿಂದ ಯುಎಸ್‌ಗೆ ತೆರಳಿದ್ದನು ಎನ್ನಲಾಗಿದೆ.

ಆದರೆ ಆತನನ್ನು ಕರೆಸಿಕೊಂಡಿದ್ದ ಆರೋಪಿಗಳು ಕಳೆದ ಏಪ್ರಿಲ್‌ನಿಂದ ಮನೆಗೆಲಸವನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾರೆ. ಮೊದಲು ಐಟಿ ಕಂಪನಿಯಲ್ಲಿ ಪೂರ್ಣ ದಿನ ಕೆಲಸ ಮಾಡಿಸಿ ಬಳಿಕ ಮನೆಗೆಲಸಕ್ಕೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ವಿದ್ಯಾರ್ಥಿ ಒಪ್ಪದಿದ್ದಾಗ ಡಿಫೈಯನ್ಸ್, ಡಾರ್ಡೆನ್ನೆ ಪ್ರೈರೀ ಮತ್ತು ಓ’ಫಾಲನ್‌ನಲ್ಲಿರುವ ಮೂರು ಮನೆಗಳ ನೆಲಮಾಳಿಗೆಯ ಸ್ನಾನಗೃಹಗಳಲ್ಲಿ ಏಳು ತಿಂಗಳು ಬಂಧಿಸಿಟ್ಟು ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲದೆ ಮಾಡಿ ನೆಲದ ಮೇಲೆ ಮಲಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್