ದಲಿತ‌ ಮಹಿಳೆಗೆ ನಾಲಗೆಯಿಂದ ಮೂತ್ರ ನೆಕ್ಕುವಂತೆ ಬಲವಂತ ಮಾಡಿ ಮಾರಣಾಂತಿಕವಾಗಿ ಥಳಿಸಿದ ಬಿಜೆಪಿ‌ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ

ಜಾರ್ಖಾಂಡ್; ಬಿಜೆಪಿ ನಾಯಕಿಯೋರ್ವಳು ತನ್ನ ಮನೆಯಲ್ಲಿ ಕೆಲಸಕ್ಕಿದ್ದ ದಲಿತ ಮಹಿಳೆಯ‌ ಮೇಲೆ 8 ವರ್ಷಗಳಿಂದ ಅಮಾನವೀಯವಾಗಿ‌ಚಿತ್ರ ಹಿಂಸೆ ನೀಡಿದ್ದಾರೆ.

ಜಾರ್ಖಂಡ್‌ನ ಗುಮ್ಲಾ ನಿವಾಸಿ ಸುನೀತಾ ಸುಮಾರು 10 ವರ್ಷಗಳ ಹಿಂದೆ ಬಿಜೆಪಿ‌ ನಾಯಕಿ ಸೀಮಾ ಪತ್ರಾ ಮನೆಯಲ್ಲಿ ಕೆಲಸಕ್ಕೆ‌ ಸೇರಿದ್ದರು.ಮನೆಗೆಲಸದವಳಾಗಿ ಪತ್ರಾ ಅವರ ಮಗಳು ವತ್ಸಲಾಳೊಂದಿಗೆ ದೆಹಲಿಯಲ್ಲಿ ಸುನೀತಾ ಕೆಲಕಾಲ ಕೆಲಸ‌ ಮಾಡಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ಇಬ್ಬರೂ ರಾಂಚಿಗೆ ಮರಳಿದ್ದರು.

ಬುಡಕಟ್ಟು ಮಹಿಳೆ ಸುನೀತಾಗೆ ನಾಲಗೆಯ ಮೂಲಕ‌ ಟಾಯ್ಲೆಟ್ ಶುಚಿಗೊಳಿಸಲು ಬಲವಂತ ಮಾಡಲಾಗಿದೆ. ಲೋಹದ ರಾಡ್ ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ರಾಂಚಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಸಂತ್ರಸ್ತೆ ಸುನೀತಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ವಿಡಿಯೋ ವೈರಲ್‌ಆಗಿದೆ. ವಿಡಿಯೋವನ್ನು ದಲಿತ್ ವಾಯ್ಸ್ ಹಂಚಿಕೊಂಡಿದೆ.

ಪತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ IAS ಅಧಿಕಾರಿಯಾಗಿದ್ದಾರೆ. ಅವರ ಫೇಸ್‌ಬುಕ್ ಪ್ರೊಫೈಲ್ ಪ್ರಕಾರ, ಪತ್ರಾ ಅವರು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ರಾಜ್ಯ ಸಂಚಾಲಕರಾಗಿದ್ದಾರೆ.

ಇದೀಗ ಆರೋಪಿತ ಬಿಜೆಪಿ ನಾಯಕಿ ವಿರುದ್ಧ ವಿವಿಧ ಸೆಕ್ಸನ್ ಗಳಡಿ ಕೇಸ್ ದಾಖಲಿಸಲಾಗಿದೆ. ಆರೋಪಿತ ನಾಯಕಿಯನ್ನು ಬಿಜೆಪಿ ಅಮಾನತು ಮಾಡಿದೆ.

ಟಾಪ್ ನ್ಯೂಸ್